ಫರೀದಾಬಾದ್ ಜನತೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸಮಾಧಾನಕರ ಸುದ್ದಿಯೊಂದನ್ನ ನೀಡಿದ್ದು, ಗಾಳಿಯ ಗುಣಮಟ್ಟ ಮಧ್ಯಮವಾಗಿತ್ತು ಎಂದು ಹೇಳಿದೆ.
ಇನ್ನುಳಿದಂತೆ ಗುರುಗಾಂವ್, ನೋಯ್ಡಾ, ಗ್ರೇಟರ್ ನೋಯ್ಡಾ ಹಾಗೂ ಗಾಜಿಯಾಬಾದ್ನಲ್ಲಿ ಶನಿವಾರ ಕಳಪೆ ಮಟ್ಟದ ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗಿದೆ.
ಸೂಚ್ಯಂಕದ ಪ್ರಕಾರ 0 – 50 ನಡುವಿನ ಐಕ್ಯೂ ಉತ್ತಮ, 51-100 ತೃಪ್ತಿದಾಯಕ, 101-200 ಮಧ್ಯಮ, 201-300 ಕಳಪೆ, 301-400 ತೀವ್ರ ಕಳಪೆ, 401-500 ಗಂಭೀರ ಎಂದು ಪರಿಗಣಿಸಲಾಗುತ್ತೆ.
ಶನಿವಾರ ಸಂಜೆ 4ಗಂಟೆಗೆ ದಾಖಲಾದ ಐಕ್ಯೂನಲ್ಲಿ ಫರೀದಾಬಾದ್ 171, ಗುರುಗಾಂವ್ 204 , ನೋಯ್ಡಾ 233, ಗ್ರೇಟರ್ ನೋಯ್ಡಾ 226 ಹಾಗೂ ಗಾಜಿಯಾಬಾದ್ 240 ಸೂಚ್ಯಂಕ ದಾಖಲಿಸಿದೆ.