alex Certify ಅಹಮದಾಬಾದ್​ನಲ್ಲಿ ಕೊರೊನಾ ಲಸಿಕೆಗೆ ನೋಂದಣಿ ಪ್ರಕ್ರಿಯೆ ಶುರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಹಮದಾಬಾದ್​ನಲ್ಲಿ ಕೊರೊನಾ ಲಸಿಕೆಗೆ ನೋಂದಣಿ ಪ್ರಕ್ರಿಯೆ ಶುರು

ಗುಜರಾತ್​​ನ ಅಹಮದಾಬಾದ್​​ನಲ್ಲಿ ಕೊರೊನಾ ಲಸಿಕೆಗಾಗಿ ನೋಂದಣಿ ಮಾಡಲು ಆದ್ಯತೆಯ ಆಧಾರದ ಜನರಿಗೆ ಆನ್​ಲೈನ್​ ಸೌಲಭ್ಯ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಹಮದಾಬಾದ್​ ಮುನ್ಸಿಪಾಲಿಟಿ ಪ್ರಕಾರ www.ahmedabadcity.gov ನಡಿಯಲ್ಲಿ ನೋಂದಾವಣಿ ಮಾಡಿಕೊಳ್ಳಬಹುದಾಗಿದೆ.‌

ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೆಲಸಗಾರರು. 50 ವರ್ಷಕ್ಕಿಂತ ಮೇಲ್ಪಟ್ಟವರಿಗಾಗಿ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕೊರೊನಾ ಲಸಿಕೆಗಾಗಿ ತಮ್ಮನ್ನ ನೋಂದಾಯಿಸಿಕೊಳ್ಳಬಯಸುವ ಜನರು ತಮ್ಮ ಡ್ರೈವಿಂಗ್​ ಲೈಸೆನ್ಸ್, ಮತದಾರರ ಗುರುತಿನ ಚೀಟಿ ಹಾಗೂ ಪಾನ್​ ಕಾರ್ಡ್​ಗಳನ್ನ ನೀಡಬಹುದಾಗಿದೆ.

ಕೊರೊನಾ ಲಸಿಕೆಯ ಮೊದಲ ಹಂತದ ಆದ್ಯತೆಯ ಗುಂಪಾಗಿ ಸುಮಾರು 3.9 ಲಕ್ಷ ಆರೋಗ್ಯ ಕಾರ್ಯಕರ್ತರನ್ನ ಈಗಾಗಲೇ ಗುರುತಿಸಲಾಗಿದೆ ಎಂದು ಗುಜರಾತ್​ ಸರ್ಕಾರ ಈ ಹಿಂದೆ ತಿಳಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...