ವಿಳಾಸ ಕೇಳುವ ನೆಪದಲ್ಲಿ 21 ವರ್ಷದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟ 24 ವರ್ಷದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾದ ಘಟನೆ ಅಹಮದಾಬಾದ್ನಲ್ಲಿ ಜರುಗಿದೆ.
ನಗರದ ನವರಂಗಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆಯು ನಗರದ ಶಾಪಿಂಗ್ ಕಾಂಪ್ಲೆಕ್ಸ್ ಒಂದಕ್ಕೆ ಭೇಟಿ ಕೊಟ್ಟಿದ್ದ ವೇಳೆ ಆಪಾದಿತ ಆಕೆಯ ಹಿಂದೆ ಸ್ಕೂಟರ್ನಲ್ಲಿ ಹಿಂಬಾಲಿಸಿಕೊಂಡು ಬಂದು ವಿಳಾಸ ಕೇಳಿದ್ದಾನೆ.
ಶಾಕಿಂಗ್..! ಅಡಕೆ ಮಾರಾಟ ಮಾಡಿ ಬರುವಾಗ ವ್ಯಾಪಾರಿ ಅಡ್ಡಗಟ್ಟಿ ಹಣ, ಚಿನ್ನ ಲೂಟಿ
ತನಗೆ ವಿಳಾಸ ಗೊತ್ತಿಲ್ಲವೆಂದ ಮಹಿಳೆ, ಆತನಿಗೆ ಸಾಧ್ಯವಾದ ನೆರವು ನೀಡಲು ಮುಂದಾಗಿದ್ದಾರೆ. ಇದೇ ವೇಳೆ ಆಕೆಯೊಂದಿಗೆ ಅಸಭ್ಯ ಭಾಷೆಯ ಪ್ರಯೋಗ ಮಾಡಿದ ಆಪಾದಿತ, ಆಕೆಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ.
ಭಯದಿಂದ ಸಂತ್ರಸ್ತೆ ಕಿರುಚಿಕೊಳ್ಳುತ್ತಲೇ ಆಪಾದಿತ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಆಕೆ ಕೊಟ್ಟ ದೂರಿನ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿ ಟಿವಿ ದೃಶ್ಯಾವಳಿ ನೋಡಿದ ಬಳಿಕ ಆಪಾದಿತ ಚಿರಾಗ್ ಭಾಟಿಯಾನನ್ನು ಬಂಧಿಸಲಾಗಿದೆ.
ಕೆಂಪು ಕೋಟೆ ಹಿಂಸಾಚಾರ: ಆರೋಪಪಟ್ಟಿ ದಾಖಲಾಗುತ್ತಲೇ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ ನಟ
ತನ್ನ ಮಡದಿ ಗರ್ಭಿಣಿಯಾದ ಕಾರಣ ಮೂರು ತಿಂಗಳಿನಿಂದ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿರದೇ ಇದ್ದ ಕಾರಣ ತಾನು ಈ ಕೃತ್ಯಕ್ಕೆ ಮುಂದಾಗಿದ್ದಾಗಿ ಆಪಾದಿತ ತಿಳಿಸಿದ್ದಾನೆ.