alex Certify ‘ಕೊರೊನಾ’ ಲಸಿಕೆ ಸ್ವೀಕರಿಸುತ್ತಿದ್ದಂತೆಯೇ ಬದಲಾಯ್ತು ಭಾಷೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ ಲಸಿಕೆ ಸ್ವೀಕರಿಸುತ್ತಿದ್ದಂತೆಯೇ ಬದಲಾಯ್ತು ಭಾಷೆ…!

ಸೋಶಿಯಲ್​ ಮೀಡಿಯಾದಲ್ಲಿ  ದಿನನಿತ್ಯ ಸಾಕಷ್ಟು ವಿಡಿಯೋಗಳು ವೈರಲ್​ ಆಗ್ತಾನೇ ಇರುತ್ತವೆ. ಈ ಸಾಲಿಗೆ ಇದೀಗ ಇನ್ನೊಂದು ವಿಚಿತ್ರ ವಿಡಿಯೋ ಸೇರ್ಪಡೆಯಾಗಿದೆ. ಕೊರೊನಾ ಲಸಿಕೆಯನ್ನ ಪಡೆದ ವ್ಯಕ್ತಿ ತನ್ನ ಅನುಭವವನ್ನ ಹಂಚಿಕೊಳ್ತಾ ಇರ್ತಾನೆ. ಆದರೆ ಅಚಾನಕ್​ ಆಗಿ ಅವನ ಧ್ವನಿ ಬದಲಾಗೋದು ಮಾತ್ರವಲ್ಲದೇ ಭಾಷೆಯೂ ಕೂಡ ಬದಲಾಗಿದೆ.

ಈ ವಿಡಿಯೋವನ್ನ ಉದ್ಯಮಿ ಹರ್ಷ ಗೋಯೆಂಕಾ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಇದರಲ್ಲಿ ಒಂದು ಕಡೆ ಸಿರೀಂಜ್​ನ ಫೋಟೋ ಹಾಗೂ ಮತ್ತೊಂದು ಕಡೆ ಮಾಸ್ಕ್​ ಧರಿಸಿದ ವ್ಯಕ್ತಿಯೊಬ್ಬನ ಫೋಟೋ ಇದೆ. ವ್ಯಕ್ತಿಯ ಧ್ವನಿ ಬದಲಾಗುತ್ತಿದ್ದಂತೆ ಆ ಜಾಗದಲ್ಲಿ ವೃದ್ಧೆಯ ಫೋಟೋ ಕಾಣಿಸುತ್ತೆ.

ವಿಡಿಯೋದಲ್ಲಿ ವ್ಯಕ್ತಿ, ಕೊರೊನಾ ಲಸಿಕೆಯನ್ನ ಹಾಕಿದ ಬಳಿಕ ನನಗೆ ಯಾವುದೇ ಅಡ್ಡ ಪರಿಣಾಮ ಉಂಟಾಗಿಲ್ಲ ಎಂದು ಹೇಳುತ್ತಿರುತ್ತಾನೆ. ಆದರೆ ಹಾಗೆ ಹೇಳಿದ ಕೆಲವೇ ನಿಮಿಷಗಳಲ್ಲಿ ಆತನ ಧ್ವನಿ ಹಾಗೂ ಭಾಷೆ ಬದಲಾದ ರೀತಿಯಲ್ಲಿ ವಿಡಿಯೋವನ್ನ ತಯಾರಿಸಲಾಗಿದೆ.

ಈ ವಿಡಿಯೋವನ್ನ ಶೇರ್​ ಮಾಡಿರುವ ಹರ್ಷ ಗೋಯೆಂಕಾ ಚೀನಿ ಲಸಿಕೆಯ ಪ್ರಭಾವ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಅಂದಹಾಗೆ ಇದೊಂದು ವೈರಲ್​ ವಿಡಿಯೋ ಆಗಿದ್ದು ಇಂತಹ ಯಾವುದೇ ಪ್ರಕರಣ ಈವರೆಗೆ ಬೆಳಕಿಗೆ ಬಂದಿಲ್ಲ.

— Harsh Goenka (@hvgoenka) February 4, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...