
ಈ ವಿಡಿಯೋವನ್ನ ಉದ್ಯಮಿ ಹರ್ಷ ಗೋಯೆಂಕಾ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ಒಂದು ಕಡೆ ಸಿರೀಂಜ್ನ ಫೋಟೋ ಹಾಗೂ ಮತ್ತೊಂದು ಕಡೆ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬನ ಫೋಟೋ ಇದೆ. ವ್ಯಕ್ತಿಯ ಧ್ವನಿ ಬದಲಾಗುತ್ತಿದ್ದಂತೆ ಆ ಜಾಗದಲ್ಲಿ ವೃದ್ಧೆಯ ಫೋಟೋ ಕಾಣಿಸುತ್ತೆ.
ವಿಡಿಯೋದಲ್ಲಿ ವ್ಯಕ್ತಿ, ಕೊರೊನಾ ಲಸಿಕೆಯನ್ನ ಹಾಕಿದ ಬಳಿಕ ನನಗೆ ಯಾವುದೇ ಅಡ್ಡ ಪರಿಣಾಮ ಉಂಟಾಗಿಲ್ಲ ಎಂದು ಹೇಳುತ್ತಿರುತ್ತಾನೆ. ಆದರೆ ಹಾಗೆ ಹೇಳಿದ ಕೆಲವೇ ನಿಮಿಷಗಳಲ್ಲಿ ಆತನ ಧ್ವನಿ ಹಾಗೂ ಭಾಷೆ ಬದಲಾದ ರೀತಿಯಲ್ಲಿ ವಿಡಿಯೋವನ್ನ ತಯಾರಿಸಲಾಗಿದೆ.
ಈ ವಿಡಿಯೋವನ್ನ ಶೇರ್ ಮಾಡಿರುವ ಹರ್ಷ ಗೋಯೆಂಕಾ ಚೀನಿ ಲಸಿಕೆಯ ಪ್ರಭಾವ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅಂದಹಾಗೆ ಇದೊಂದು ವೈರಲ್ ವಿಡಿಯೋ ಆಗಿದ್ದು ಇಂತಹ ಯಾವುದೇ ಪ್ರಕರಣ ಈವರೆಗೆ ಬೆಳಕಿಗೆ ಬಂದಿಲ್ಲ.