alex Certify ವಿದ್ಯಾರ್ಥಿನಿ ಸವಾಲು ಸ್ವೀಕರಿಸಿ ಪುಶ್ ಅಪ್ ಮಾಡಿದ ರಾಹುಲ್ – ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿನಿ ಸವಾಲು ಸ್ವೀಕರಿಸಿ ಪುಶ್ ಅಪ್ ಮಾಡಿದ ರಾಹುಲ್ – ವಿಡಿಯೋ ವೈರಲ್

ಚೆನ್ನೈ: ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಗಟ್ಟಿಗೊಳಿಸಲು ಓಡಾಡುತ್ತಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ಮೀನುಗಾರರ ಜತೆ ದೋಣಿಯಲ್ಲಿ ತೆರಳಿ ಸಮುದ್ರದಲ್ಲಿ ಈಜಿದ್ದರು. ನಂತರ ಒದ್ದೆ ಶರ್ಟ್ ನಲ್ಲಿದ್ದ ರಾಹುಲ್ ದೇಹದಲ್ಲಿ ಸಿಕ್ಸ್ ಪ್ಯಾಕ್ ಕಾಣಿಸುವ ಫೋಟೋ ವೈರಲ್ ಆಗಿತ್ತು.

ಹಲವರು ನಿಮ್ಮ ಫಿಟ್ ನೆಸ್ ಗುಟ್ಟೇನು ಎಂದು ಪ್ರಶ್ನಿಸಿದ್ದರು. ಅದರ ಮುಂದಿನ ಭಾಗವಾಗಿ ಈಗ ತಮಿಳುನಾಡಿನಲ್ಲಿ 50 ವರ್ಷದ ರಾಹುಲ್ ಪುಶ್ ಅಪ್ ಮಾಡಿ ಸುದ್ದಿಯಾಗಿದ್ದಾರೆ.

ದೇವೇಗೌಡರಿಗೆ ‘ಭಾರತ ರತ್ನ’ ನೀಡಲು ನಂಜಾವಧೂತ ಸ್ವಾಮೀಜಿ ಒತ್ತಾಯ

ಅಸೆಂಬ್ಲಿ ಚುನಾವಣೆಯ ಸಲುವಾಗಿ ಅವರು ತಮಿಳುನಾಡಿನಲ್ಲಿ ರೋಡ್ ಶೋ ಮಾಡಿದರು. ಅದಕ್ಕೂ ಪೂರ್ವದಲ್ಲಿ ಅವರು ಸೇಂಟ್ ಜೋಸೆಫ್ ಮೆಟ್ರಿಕ್ಯುಲೇಶನ್ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ಮಾಡಿದರು.

ಆ ಸಂದರ್ಭದಲ್ಲಿ ಅವರು ವಿದ್ಯಾರ್ಥಿನಿಯೊಬ್ಬಳ ಚಾಲೆಂಜ್ ಸ್ವೀಕರಿಸಿ 15 ಪುಶಪ್ ಮಾಡಿದರು. ನಂತರ ಒಮ್ಮೆ ಒಂಟಿ ಕೈ ಡಿಪ್ಸ್ ಕೂಡ ಹೊಡೆದರು. ಎಎನ್‌ಐ ಅದರ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದೆ. 1500ಕ್ಕೂ ಅಧಿಕ ಜನ ರೀ ಟ್ವೀಟ್ ಮಾಡಿದ್ದು, 2.20 ಲಕ್ಷ ಜನ ವಿಡಿಯೋ ವೀಕ್ಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...