ಬಾಕಿ ಉಳಿದುಕೊಂಡಿದ್ದ ಕೋವಿಡ್ ಲಸಿಕೆಗಳು ಹಾಳಾಗುವುದನ್ನು ತಪ್ಪಿಸಲು ಮುಂದಾದ ಆರೋಗ್ಯ ಕಾರ್ಯಕರ್ತರ ಸಮೂಹವೊಂದು ಹಿಮಪಾತವೊಂದರಲ್ಲಿ ಸಿಲುಕಿದ್ದ ಮಂದಿಗೆ ಚುಚ್ಚುಮದ್ದುಗಳನ್ನು ಕೊಡುವ ಮೂಲಕ ಸಮಯ ಪ್ರಜ್ಞೆ ಮೆರೆದ ಘಟನೆ ಒರೆಗಾನ್‌ನಲ್ಲಿ ನಡೆದಿದೆ.
ದಂಡ ತಪ್ಪಿಸಿಕೊಳ್ಳಲು 30 ಕೆಜಿ ಕಿತ್ತಳೆ ಹಣ್ಣು ತಿಂದವರ ಗತಿ ಈಗ ಏನಾಗಿದೆ ಗೊತ್ತಾ…?
ಇಲ್ಲಿನ ಇಲಿನೋಯಿ ವ್ಯಾಲಿ ಪ್ರೌಢಶಾಲೆಯ ಆವರಣವೊಂದರಲ್ಲಿ ಲಸಿಕೆ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಬರುತ್ತಿದ್ದ ಜೋಸೆಫೈನ್ ಕೌಂಟಿಯ ಸಾರ್ವಜನಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾದಿಯಲ್ಲಿ ಸಿಕ್ಕ ಪ್ರವಾಸಿಗರಿಗೆ ಈ ಲಸಿಕೆಗಳನ್ನು ಕೊಟ್ಟಿದೆ. ವಿಪರೀತದ ಹಿಮಪಾತದ ಕಾರಣ ತಂತಮ್ಮ ಮನೆಗಳಿಗೆ ಬೇಗ ತಲುಪುವುದು ಸಾಧ್ಯವಿಲ್ಲ ಎಂದು ಅರಿತ ಈ ವೈದ್ಯಕೀಯ ಸಿಬ್ಬಂದಿ ಅದೇ ಜಾಗದಲ್ಲಿ ನಿಂತಿದ್ದ ಪ್ರವಾಸಿಗರಿಗೆ ಡೋಸ್‌ಗಳನ್ನು ಕೊಟ್ಟು ಖಾಲಿ ಮಾಡಿದ್ದಾರೆ.
ಘಟನೆಯನ್ನು ವಿವರಿಸಿದ ಆರೋಗ್ಯ ಸೇವಾ ಕೇಂದ್ರವು ತನ್ನ ಫೇಸ್ಬುಕ್ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿದೆ.