
ಕ್ಯಾಮರಾ ಕಂಡು ನಾಚಿಕೊಂಡ ಆನೆಯೊಂದು ತನ್ನ ಮಾವುತನಿಗೆ ಹೋಗಿ ದೂರು ಹೇಳುತ್ತಿರುವ ಕ್ಲಿಪ್ ಇದಾಗಿದೆ.
ತಮಿಳುನಾಡಿನ ತಿರುಚಿರಾಪಳ್ಳಿಯ ಶ್ರೀರಂಗಂನ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಆಂಡಾಲ್ ಎಂಬ ಹೆಣ್ಣು ಆನೆ ಇದಾಗಿದೆ. ದ್ವಾರದ ಬಳಿ ಕೂತಿದ್ದ ಮಾವುತನ ಬಳಿ ಹೋದ ಆನೆ ತಲೆ ಬಗ್ಗಿಸಿಕೊಂಡಿರೋದನ್ನ ಕಾಣಬಹುದಾಗಿದೆ. ಮಾವುತ ಆನೆಯ ಸೊಂಡಿಲನ್ನ ತಬ್ಬಿಕೊಂಡಿದ್ದಾನೆ. ಇವರಿಬ್ಬರ ಸಂಭಾಷಣೆ ಕಂಡ ನೆಟ್ಟಿಗರು ಇಂಟರ್ನೆಟ್ನಲ್ಲಿ ಕಂಡ ಅದ್ಭುತ ದೃಶ್ಯವಿದು ಎಂದು ಬಣ್ಣಿಸಿದ್ದಾರೆ.