alex Certify ನೆಟ್ಟಿಗರ ಮೊಗದಲ್ಲಿ ಸಂತಸ ಮೂಡಿಸಿದ ಆನೆ ಮರಿಯ ಶವರ್ ಬಾತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಮೊಗದಲ್ಲಿ ಸಂತಸ ಮೂಡಿಸಿದ ಆನೆ ಮರಿಯ ಶವರ್ ಬಾತ್

ಬಿರು ಬೇಸಿಗೆಯ ಸೆಕೆ, ಬಿಸಿಲ ಬೇಗೆಗೆ ತತ್ತರಿಸುವ ನಾವುಗಳು ತಂಪನ್ನು ಹುಡುಕುತ್ತೇವೆ. ಆದರೆ, ಪ್ರಾಣಿಗಳ ಪರಿಸ್ಥಿತಿಯನ್ನು ಯೋಚಿಸಿದ್ದೀರಾ? ಆದರೆ ಇಲ್ಲೊಂದು ಮೃಗಾಲಯದಲ್ಲಿ ಆನೆಯೊಂದು ಕೂಲ್ ಕೂಲ್ ಸ್ನಾನ ಮಾಡಿ ನೆಟ್ಟಿಗರ ಮನ ಗೆದ್ದಿದೆ.

ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಆನೆ ಮರಿ ಮೊದಲು ನೀರಿನಲ್ಲಿ ಸ್ನಾನ ಮಾಡಲು ಹಿಂಜರಿದಿದೆ.

ಆದರೆ ಅದಕ್ಕೆ ನೀರನ್ನು ಬಿಡುತ್ತಲೇ ಹೋದಾಗ ಅದು ಖುಷಿಯಿಂದ ನಲಿದಾಡಿ ಸಂತೋಷವನ್ನು ವ್ಯಕ್ತಪಡಿಸಿದೆ. ಜೊತೆಗೆ ಅಲ್ಲೇ ಮಲಗಿ ಉರುಳಾಡಿ ನೀರಿಗೆ ಮೈಯೊಡ್ಡಿದೆ. ಅದರ ಖುಷಿ ಕಂಡ ನೆಟ್ಟಿಗರು ಫಿದಾ ಆಗಿದ್ದಾರೆ.

ಈಗಾಗಲೇ ಈ ವಿಡಿಯೋ 22.7k ವೀಕ್ಷಣೆ ಕಂಡಿದ್ದರೆ, 3072 ಲೈಕ್ ಹಾಗೂ 700ಕ್ಕೂ ಹೆಚ್ಚು ಕಮೆಂಟ್ ಗಳು ಬಂದಿವೆ. ಮೇ 1 ರಂದು ಸುಶಾಂತ್ ಈ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...