alex Certify ಜನರಲ್ಲಿ ವಿಶ್ವಾಸ ಮೂಡಿಸಲು ಸ್ವತಃ ಕೊರೊನಾ ಲಸಿಕೆ ಸ್ವೀಕರಿಸಿದ ಸೀರಮ್ ಸಿಇಓ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನರಲ್ಲಿ ವಿಶ್ವಾಸ ಮೂಡಿಸಲು ಸ್ವತಃ ಕೊರೊನಾ ಲಸಿಕೆ ಸ್ವೀಕರಿಸಿದ ಸೀರಮ್ ಸಿಇಓ

ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಿಗ್ಗೆ ಕೊರೊನಾ ಲಸಿಕೆ ಹಂಚಿಕೆಗೆ ಪ್ರಕ್ರಿಯೆಗೆ ಚಾಲನೆ ನೀಡಿದ ಕೆಲವೇ ಗಂಟೆಗಳ ಬಳಿಕ ಸೀರಮ್​ ಇನ್ಸ್​ಟಿಟ್ಯೂಟ್ ಸಿಇಒ ಆದರ್ ಪೂನವಾಲಾಗೆ ಕೋವಿಶೀಲ್ಡ್​ ಲಸಿಕೆಯ ಮೊದಲ ಡೋಸ್​ ನೀಡಲಾಗಿದೆ.

ಆಸ್ಟ್ರೇಜೆನಿಕಾ ಹಾಗೂ ಆಕ್ಸ್​ಫರ್ಡ್ ವಿಶ್ವ ವಿದ್ಯಾಲಯ ಅಭಿವೃದ್ಧಿಪಡಿಸಿದ ಲಸಿಕೆಯನ್ನ ಸ್ವೀಕರಿಸಿದ ಪೂನಾವಾಲಾ ಈ ಬಗ್ಗೆ ಟ್ವಿಟರ್​ನಲ್ಲಿ ವಿಡಿಯೋ ಶೇರ್​ ಮಾಡಿದ್ದಾರೆ. ವಿಡಿಯೋದಲ್ಲಿ ಪೂನಾವಾಲಾಗೆ ಮಾಸ್ಕ್​ ಧರಿಸಿದ ವ್ಯಕ್ತಿ ಲಸಿಕೆ ನೀಡುತ್ತಿರೋದನ್ನ ಕಾಣಬಹುದಾಗಿದೆ.

ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತಿ ದೊಡ್ಡ ಲಸಿಕೆ ಡ್ರೈವ್​ಗೆ ಚಾಲನೆ ನೀಡಿದ್ರು. ಕೋವಿಶೀಲ್ಡ್ ಕೂಡ ಈ ಐತಿಹಾಸಿಕ ಪ್ರಯತ್ನದ ಭಾಗವಾಗಿದೆ. ಕೋವಿಶೀಲ್ಡ್ ಸುರಕ್ಷತೆ ಹಾಗೂ ಪರಿಣಾಮವನ್ನ ಅನುಮೋದಿಸುವ ಸಲುವಾಗಿ ಆರೋಗ್ಯ ಕಾರ್ಯಕರ್ತರ ಜೊತೆ ನಾನು ಕೂಡ ಲಸಿಕೆ ಸ್ವೀಕಾರ ಮಾಡಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.

https://twitter.com/i/status/1350338040321851392

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...