ಪಾಣಿಪತ್ ನ ಮಾಡೆಲ್ ಟೌನ್ ನ ಮಲ್ಹೋತ್ರಾ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಒಂದೇ ತಾಯಿ ಹೊಟ್ಟೆಯಲ್ಲಿ ಒಂದೇ ಬಾರಿ ಜನಿಸಿದ್ದ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಮೂರು ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಮಹಾತಾಯಿ ಏಪ್ರಿಲ್ 12ರಂದು ಜನ್ಮ ನೀಡಿದ್ದಳು.
ಏಪ್ರಿಲ್ 16ರಂದು ಎರಡು ಶಿಶು ಹಾಗೂ ಏಪ್ರಿಲ್ 18ರಂದು ಮತ್ತೆರಡು ಶಿಶು ಸಾವನ್ನಪ್ಪಿದೆ ಎನ್ನಲಾಗಿದೆ. ಆಸ್ಪತ್ರೆ ಸಿಬ್ಬಂದಿ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ. ಇದು ಸಾವಿಗೆ ಕಾರಣವೆಂದು ಸಂಬಂಧಿಕರು ಆರೋಪ ಮಾಡಿದ್ದಾರೆ. ಎಲ್ಲ ಮಕ್ಕಳ ತೂಕ ತುಂಬಾ ಕಡಿಮೆಯಿತ್ತು. ಮಕ್ಕಳ ತೂಕ 800 ಕಿಲೋಗ್ರಾಮ್ ನಿಂದ 1 ಕೆ.ಜಿಯಿತ್ತು ಎನ್ನಲಾಗಿದೆ.
ತಾಯಿ ಕಾಜಲ್ ಪರಿಸ್ಥಿತಿ ಸುಧಾರಿಸುತ್ತಿದೆ. ಐಸಿಯುವಿನಲ್ಲಿ ಚಿಕಿತ್ಸೆ ನಡೆಯುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.