alex Certify BIG NEWS: ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು – ತನಿಖೆ ಪೂರ್ಣಗೊಳ್ಳದಿದ್ದರೆ ಆರೋಪಿಗಿದೆ ಜಾಮೀನು ಪಡೆಯುವ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು – ತನಿಖೆ ಪೂರ್ಣಗೊಳ್ಳದಿದ್ದರೆ ಆರೋಪಿಗಿದೆ ಜಾಮೀನು ಪಡೆಯುವ ಅವಕಾಶ

ನವದೆಹಲಿ: ಸಮಯಕ್ಕೆ ಸರಿಯಾಗಿ ತನಿಖೆ ಪೂರ್ಣಗೊಳ್ಳದಿದ್ದರೆ ಆರೋಪಿಗಳಿಗೆ ಜಾಮೀನು ಪಡೆಯುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ನ್ಯಾಯಾಧೀಶರು ತಮ್ಮ ಶಾಸನಬದ್ಧ ಹಕ್ಕನ್ನು ಆರೋಪಿಗಳಿಗೆ ಕಡ್ಡಾಯವಾಗಿ ತಿಳಿಸಬೇಕು. ಆರೋಪಿ ವಿರುದ್ಧದ ಪ್ರಕರಣದ ತನಿಖೆ ನಡೆಸುತ್ತಿರುವ ಸಂಸ್ಥೆ ನಿಗದಿತ ಸಮಯದ ಮಿತಿಯೊಳಗೆ ತನಿಖೆಯನ್ನು ಪೂರ್ಣಗೊಳಿಸದಿದ್ದರೆ ಜಾಮೀನು ನೀಡಬೇಕು ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿದೆ.

ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ನ್ಯಾಯಪೀಠ, ಇಂಗ್ಲೆಂಡ್ ನಲ್ಲಿ ದೇಶದ್ರೋಹದಂತಹ ಗಂಭೀರ ಅಪರಾಧ ಹೊಂದಿದ ವ್ಯಕ್ತಿಯನ್ನು ಕೂಡ ವಿಚಾರಣೆ ಪ್ರಾರಂಭಿಸುವವರೆಗೆ ಅನಿರ್ದಿಷ್ಟಾವಧಿಗೆ ಜೈಲಿನಲ್ಲಿ ಬಂಧಿಸಿ ಇಡುವುದಿಲ್ಲ ಎಂದು ಉಲ್ಲೇಖಿಸಿದೆ.

ತನಿಖಾ ಸಂಸ್ಥೆ ಸಮಯಕ್ಕೆ ಸರಿಯಾಗಿ ತನಿಖೆ ಪೂರ್ಣಗೊಳಿಸಲು ವಿಫಲವಾದರೆ ಅಪರಾಧ ಸಂಹಿತೆ ಸೆಕ್ಷನ್ 167(2)ರ ಅಡಿಯಲ್ಲಿ ಆರೋಪಿಗೆ ಜಾಮೀನು ನೀಡಲು ಅನಿರ್ದಿಷ್ಟ ಹಕ್ಕು ಇದೆ ಎಂದು ನ್ಯಾಯಾಲಯ ಹೇಳಿದೆ.

ಸೆಕ್ಷನ್ 167 ರ ಅಡಿಯಲ್ಲಿ ಮರಣ ದಂಡನೆ, ಜೀವಾವಧಿ ಶಿಕ್ಷೆ ಅಥವಾ 10 ವರ್ಷಗಳಿಗಿಂತ ಹೆಚ್ಚಿನ ಶಿಕ್ಷೆ ವಿಧಿಸಬಹುದಾಗಿರುವ ಪ್ರಕರಣದಲ್ಲಿ ಆರೋಪಿಯನ್ನು 90 ದಿನಗಳವರೆಗೆ, ಬೇರೆ ಅಪರಾಧಕ್ಕೆ ತನಿಖೆ ಸಂಬಂಧಿಸಿದ್ದರೆ 60 ದಿನಗಳವರೆಗೆ ಬಂಧಿಸಿ ಇಡಬಹುದು. NDPS ಕಾಯ್ದೆಯಂತಹ ಕೆಲವು ವಿಶೇಷ ಕಾನೂನುಗಳಲ್ಲಿ 180 ದಿನಗಳವರೆಗೆ ಬಂಧನದ ಅವಧಿ ವಿಸ್ತರಿಸಬಹುದಾಗಿದೆ.

ತನಿಖೆ ಹೆಸರಲ್ಲಿ ಅನಿರ್ದಿಷ್ಟಾವಧಿಗೆ ಬಂಧನದಲ್ಲಿರಿಸಿಕೊಳ್ಳದಂತೆ ಸಮಯದ ಮಿತಿ ನಿಗದಿಪಡಿಸಲಾಗಿದೆ ಎಂದು ನ್ಯಾಯಮೂರ್ತಿ ಮೋಹನ್ ಎಂ. ಶಾಂತನಗೌಡರ ಅಭಿಪ್ರಾಯಪಟ್ಟಿದ್ದಾರೆ.

ಆರೋಪಿಗಳ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಅಗತ್ಯವನ್ನು ಗುರುತಿಸಿದ್ದರೂ ಕೂಡ ತನಿಖೆ ಪೂರ್ಣ ಗೊಳಿಸಲು ಸಾಕಷ್ಟು ಸಮಯದ ಅಗತ್ಯವಿರುತ್ತದೆ. ವೈಯಕ್ತಿಕ ಸ್ವಾತಂತ್ರ್ಯ ಸಂವಿಧಾನದ 21 ನೇ ಪರೀಕ್ಷೆಯ ಅಡಿಯಲ್ಲಿ ಮೂಲಭೂತ ಹಕ್ಕಾಗಿದೆ. ತನಿಖಾ ಸಂಸ್ಥೆ ನಿಗದಿತ ಅವಧಿಯೊಳಗೆ ಅಗತ್ಯವಾದ ಸಾಕ್ಷಗಳನ್ನು ಸಂಗ್ರಹಿಸಬೇಕು. ಅದು ವಿಫಲವಾದಲ್ಲಿ ಆರೋಪಿಯನ್ನು ಬಂಧಿಸಿ ಇಟ್ಟುಕೊಳ್ಳಬಾರದು. ತನಿಖಾಧಿಕಾರಿಗಳು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...