ಹೈದರಾಬಾದ್ನ ಮೃಗಾಲಯದ ಪ್ರಾಣಿಯಲ್ಲಿ ಕೊರೊನಾ ಸೋಂಕು ಕಂಡುಬಂದ ಬಳಿಕ ರಾಜ್ಯದ ಮೃಗಾಲಯಗಳ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಈ ಪ್ರಕರಣ ಸಂಬಂಧ ಮಾತನಾಡಿದ ಮೃಗಾಲಯದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ ರಾಜ್ಯದ ಯಾವುದೇ ಮೃಗಾಲಯಗಳ ಪ್ರಾಣಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿಲ್ಲ ಅಂತಂದ್ರು.
ಮೈಸೂರಿನ ಮೃಗಾಲಯಗಳಲ್ಲಿ ಸಿಂಹ, ಚಿರತೆ ಹಾಗೂ ಹುಲಿಗಳಿವೆ. ಇವುಗಳಿಗೆ ಕೊರೊನಾ ಹರಡುವ ಸಾಧ್ಯತೆ ಹೆಚ್ಚಿರುತ್ತೆ. ಆದರೆ ನಮ್ಮಲ್ಲಿ ಯಾವುದೇ ಪ್ರಾಣಿಗಳಲ್ಲಿ ಸೋಂಕಿನ ಲಕ್ಷಣ ಕಂಡುಬಂದಿಲ್ಲ. ಕೇಂದ್ರ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನ ನಾವು ಪಾಲಿಸುತ್ತಿದ್ದೇವೆ. ಕೊರೊನಾ ಸೋಂಕು ತಗುಲಿದ ಪ್ರಾಣಿಗೆ ಕೆಮ್ಮು ಶುರುವಾಗುತ್ತೆ. ನಂತರದಲ್ಲಿ ಆಹಾರ ಸೇವನೆ ಮಾಡೋದನ್ನ ಬಿಡುತ್ತವೆ. ಆದರೆ ನಮ್ಮಲ್ಲಿ ಯಾವುದೇ ಪ್ರಾಣಿಗಳಲ್ಲಿ ಈ ಲಕ್ಷಣವಿಲ್ಲ ಎಂದು ಹೇಳಿದ್ರು.
ಆಕಳ ಸಗಣಿಯಿಂದ ದೂರವಾಗುತ್ತಾ ಕೊರೊನಾ ಸೋಂಕು….?
ಕೆಲವು ದಿನಗಳ ಹಿಂದಷ್ಟೇ ಹೈದರಾಬಾದ್ನ ನೆಹರೂ ಜೈವಿಕ ಪಾರ್ಕ್ನಲ್ಲಿ 8 ಏಷ್ಯಾ ತಳಿಯ ಸಿಂಹಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಸಿಂಹಗಳಲ್ಲಿ ಉಸಿರಾಟದ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಅವುಗಳ ಗಂಟಲು ದ್ರವ ಸಂಗ್ರಹಿಸಿ ಆರ್ ಟಿ – ಪಿಸಿಆರ್ ಟೆಸ್ಟ್ ನಡೆಸಿದ ವೇಳೆ ಸಿಂಹಗಳಲ್ಲಿ ಸೋಂಕು ಇರೋದು ದೃಢವಾಗಿತ್ತು. ಇದು ಭಾರತದಲ್ಲಿ ಪ್ರಾಣಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಮೊಟ್ಟ ಮೊದಲ ಪ್ರಕರಣವಾಗಿದೆ.