ಕೋವಿಡ್-19 ಸೋಂಕಿನ ಮೊದಲ ಪ್ರಕರಣ ದಾಖಲಾದ ಒಂದು ವರ್ಷದ ಬಳಿಕ ಭಾರತವು ಸಾಂಕ್ರಮಿಕದ ಕಪಿಮುಷ್ಠಿಯಿಂದ ಹೊರಬರುವ ಸಾಧ್ಯತೆ ತೋರುತ್ತಿದೆ.
ಒಂದೂವರೆ ಲಕ್ಷ ಜೀವಗಳನ್ನು ಬಲಿ ತೆಗೆದುಕೊಂಡ ಈ ಸೋಂಕಿನ ಕಾರಣದಿಂದ ಆರ್ಥಿಕ ಹಿಂಜರಿತದೊಂದಿಗೆ ಅನೇಕರ ಜೀವನೋಪಾಯಗಳೂ ಬುಡಮೇಲಾಗಿವೆ. ಪ್ರತಿನಿತ್ಯ 12,000-14,000ದಷ್ಟು ಹೊಸ ಪ್ರಕರಣಗಳು ದಾಖಲಾಗುತ್ತಿದ್ದರೂ ಸಹ ಒಟ್ಟಾರೆ ಸೋಂಕಿತರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಲೇ ಇದೆ.
ಭಾರತದಲ್ಲಿ ಮತ್ತೊಂದು ಲಸಿಕೆ ತರಲು ಸೀರಂ ಇನ್ಸ್ಟಿಟ್ಯೂಟ್ ಸಿದ್ಧತೆ
ಇಷ್ಟೆಲ್ಲಾ ಆದರೂ ಸಹ ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಇದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಮದ್ದಿನಿಂದಾಗಲೀ ಅಥವಾ ನೈಸರ್ಗಿಕವಾಗಿಯೇ ಆಗಲೀ ವೈರಸ್ ವಿರುದ್ಧ ಬೆಳೆಸಿಕೊಂಡ ರೋಗನಿರೋಧಕ ಶಕ್ತಿ ಅದೆಷ್ಟು ದಿನ ಕೆಲಸ ಮಾಡುತ್ತದೆ ಎಂದು ಹೇಳುವುದು ಕಷ್ಟವೆಂದಿರುವ ವಿಜ್ಞಾನಿಗಳು ಇನ್ನೂ ಒಂದಷ್ಟು ಕಾಲ ಜನರು ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂಥ ಮುನ್ನೆಚ್ಚರಿಕಾ ಕ್ರಮಗಳನ್ನು ಮುಂದುವರೆಸಬೇಕೆಂದು ಸೂಚಿಸಿದ್ದಾರೆ.