
ಈಗಾಗಲೇ ಈ ಸಂವಾದ ಕಾರ್ಯಕ್ರಮದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಕಾರ್ಯಕ್ರಮದಲ್ಲಿ ಓರ್ವ ವಿದ್ಯಾರ್ಥಿನಿ ರಾಹುಲ್ ಗಾಂಧಿ ಬಳಿ ಆಟೋಗ್ರಾಫ್ ಕೇಳಿದ್ದಾರೆ. ಕೂಡಲೇ ವಿದ್ಯಾರ್ಥಿನಿ ಬಳಿ ಬಾಗಿ ರಾಹುಲ್ ಗಾಂಧಿ ಆಟೋಗ್ರಾಫ್ ನೀಡಿದ್ದಾರೆ.
ರಾಹುಲ್ ಗಾಂಧಿ ಆಟೋಗ್ರಾಫ್ ನೀಡುತ್ತಿದ್ದ ವೇಳೆ ವಿದ್ಯಾರ್ಥಿನಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಆನಂದಬಾಷ್ಪ ಹರಿಸುತ್ತಿದ್ದ ವಿದ್ಯಾರ್ಥಿನಿಯ ಬಳಿ ಬಂದ ರಾಹುಲ್ ಗಾಂಧಿ ಆಕೆಯ ಜೊತೆ ಕ್ಯಾಮರಾಗೆ ಪೋಸ್ ನೀಡಿದ್ದಾರೆ.
ಸಿಎಂ ಯಡಿಯೂರಪ್ಪರಿಗೆ ಬಿಜೆಪಿ ಹೈಕಮಾಂಡ್ ಗುಡ್ ನ್ಯೂಸ್
ಟ್ವಿಟರ್ನಲ್ಲಿ ಈ ವಿಡಿಯೋವನ್ನ ಸಾಕಷ್ಟು ಕಾಂಗ್ರೆಸ್ ಕಾರ್ಯಕರ್ತರು ಶೇರ್ ಮಾಡಿದ್ದಾರೆ. ಕಾಂಗ್ರೆಸ್ ಸಾಮಾಜಿಕ ಮಾಧ್ಯಮದ ಕನ್ವೀನರ್ ರುಚಿರಾ ಚತುರ್ವೇದಿ, ಪುದುಚೇರಿಯ ಭಾರತಿದಾಸನ್ ಕಾಲೇಜಿನ ಯುವ ವಿದ್ಯಾರ್ಥಿನಿ ರಾಹುಲ್ ಗಾಂಧಿ ಬಳಿ ಆಟೋಗ್ರಾಫ್ ಪಡೆಯುತ್ತಿದ್ದ ವೇಳೆ ಸಂತೋಷದಿಂದ ಕಣ್ಣೀರು ಹಾಕಿದ್ದಾರೆ. ಈ ದೃಶ್ಯ ತುಂಬಾನೇ ಹೃದಯಸ್ಪರ್ಶಿಯಾಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ.
ಈ ವಿಡಿಯೋವನ್ನ ಇಷ್ಟಪಟ್ಟವರ ಗುಂಪು ಒಂದಡೆಯಾದರೆ ಇದು ಚುನಾವಣಾ ಗಿಮಿಕ್ ಎಂದು ಅನೇಕರು ಜರಿದಿದ್ದಾರೆ.