alex Certify ಆಹಾರ ಪೊಟ್ಟಣಗಳ ಮೇಲೆ ಕೊರೊನಾ ಸೋಂಕಿತರಿಗೆ ವಿಶೇಷ ಸಂದೇಶ ಕಳುಹಿಸಿದ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಹಾರ ಪೊಟ್ಟಣಗಳ ಮೇಲೆ ಕೊರೊನಾ ಸೋಂಕಿತರಿಗೆ ವಿಶೇಷ ಸಂದೇಶ ಕಳುಹಿಸಿದ ಬಾಲಕ

ಸಂಪೂರ್ಣ ವಿಶ್ವವೇ ಸಂಕಷ್ಟದಲ್ಲಿರುವ ಈ ಕಾಲದಲ್ಲಿ ಆತ್ಮವಿಶ್ವಾಸ ತುಂಬಬಲ್ಲ ಸಣ್ಣ ಮಾತೂ ಸಹ ಭಾರೀ ಖುಷಿಯನ್ನ ಕೊಡಬಹುದು. ಇದೇ ಮಾತನ್ನ ಅತ್ಯಂತ ಚಿಕ್ಕ ವಯಸ್ಸಿಗೆ ಅರ್ಥ ಮಾಡಿಕೊಂಡ ಬಾಲಕನೊಬ್ಬ ತನ್ನ ತಾಯಿ ಕೋವಿಡ್​ ರೋಗಿಗಳಿಗೆಂದು ತಯಾರು ಮಾಡಿದ್ದ ಊಟದ ಪ್ಯಾಕೆಟ್​ಗಳ ಮೇಲೆ ‘ಖುಷಿಯಾಗಿರಿ’ ಎಂದು ಬರೆದಿದ್ದಾನೆ. ಬಾಲಕ ಈ ರೀತಿ ಆಹಾರ ಪೊಟ್ಟಣಗಳ ಮೇಲೆ ಸಂದೇಶ ಬರೆಯುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಫೋಟೋದಲ್ಲಿ ಹಸಿರು ಬಣ್ಣದ ಶರ್ಟ್ ಹಾಕಿದ್ದ ಬಾಲಕ ಆಹಾರದ ಪೊಟ್ಟಣಗಳ ಮೇಲೆ ಖುಷಿಯಾಗಿರಿ ಎಂದು ಬರೆದು ಒಂದು ಸ್ಮೈಲಿಯನ್ನ ಬಿಡಿಸಿದ್ದಾನೆ.

ಕೋವಿಡ್‌ನಿಂದ ಜನರನ್ನು ರಕ್ಷಿಸಲು ʼಕೊರೊನಾ ದೇವಿʼ ಪ್ರತಿಷ್ಠಾಪನೆ

ಈ ಫೋಟೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿರುವ @manishsarangal1 ಎಂಬವರು ‘ಈ ಬಾಲಕನ ತಾಯಿ ಕೋವಿಡ್ ಸೋಂಕಿತರಿಗೆಂದು ಆಹಾರದ ಪೊಟ್ಟಣವನ್ನ ತಯಾರಿಸಿದ್ರೆ ಈ ಪುಟ್ಟ ಫೋರ ಅವುಗಳ ಮೇಲೆ ಖುಷಿಯಾಗಿರಿ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...