ಸಂಪೂರ್ಣ ವಿಶ್ವವೇ ಸಂಕಷ್ಟದಲ್ಲಿರುವ ಈ ಕಾಲದಲ್ಲಿ ಆತ್ಮವಿಶ್ವಾಸ ತುಂಬಬಲ್ಲ ಸಣ್ಣ ಮಾತೂ ಸಹ ಭಾರೀ ಖುಷಿಯನ್ನ ಕೊಡಬಹುದು. ಇದೇ ಮಾತನ್ನ ಅತ್ಯಂತ ಚಿಕ್ಕ ವಯಸ್ಸಿಗೆ ಅರ್ಥ ಮಾಡಿಕೊಂಡ ಬಾಲಕನೊಬ್ಬ ತನ್ನ ತಾಯಿ ಕೋವಿಡ್ ರೋಗಿಗಳಿಗೆಂದು ತಯಾರು ಮಾಡಿದ್ದ ಊಟದ ಪ್ಯಾಕೆಟ್ಗಳ ಮೇಲೆ ‘ಖುಷಿಯಾಗಿರಿ’ ಎಂದು ಬರೆದಿದ್ದಾನೆ. ಬಾಲಕ ಈ ರೀತಿ ಆಹಾರ ಪೊಟ್ಟಣಗಳ ಮೇಲೆ ಸಂದೇಶ ಬರೆಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೋದಲ್ಲಿ ಹಸಿರು ಬಣ್ಣದ ಶರ್ಟ್ ಹಾಕಿದ್ದ ಬಾಲಕ ಆಹಾರದ ಪೊಟ್ಟಣಗಳ ಮೇಲೆ ಖುಷಿಯಾಗಿರಿ ಎಂದು ಬರೆದು ಒಂದು ಸ್ಮೈಲಿಯನ್ನ ಬಿಡಿಸಿದ್ದಾನೆ.
ಕೋವಿಡ್ನಿಂದ ಜನರನ್ನು ರಕ್ಷಿಸಲು ʼಕೊರೊನಾ ದೇವಿʼ ಪ್ರತಿಷ್ಠಾಪನೆ
ಈ ಫೋಟೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿರುವ @manishsarangal1 ಎಂಬವರು ‘ಈ ಬಾಲಕನ ತಾಯಿ ಕೋವಿಡ್ ಸೋಂಕಿತರಿಗೆಂದು ಆಹಾರದ ಪೊಟ್ಟಣವನ್ನ ತಯಾರಿಸಿದ್ರೆ ಈ ಪುಟ್ಟ ಫೋರ ಅವುಗಳ ಮೇಲೆ ಖುಷಿಯಾಗಿರಿ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.