alex Certify ಭರ್ಜರಿ ಭೋಜನ ಮಾಡಿ ನೀರಲ್ಲಿ ರೆಸ್ಟ್‌ ಮಾಡಿದ ಹೆಬ್ಬಾವು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಭೋಜನ ಮಾಡಿ ನೀರಲ್ಲಿ ರೆಸ್ಟ್‌ ಮಾಡಿದ ಹೆಬ್ಬಾವು…!

ಸಹಜವಾಗಿ ಹೆಬ್ಬಾವುಗಳ ಫೋಟೋ ಅಥವಾ ವಿಡಿಯೊ ಎಂದರೆ ಗಾಬರಿ ಮೂಡಿಸುತ್ತದೆ. ಆದರೆ ಈಗ ನಾವು ತೋರಿಸುತ್ತಿರುವ ವಿಡಿಯೊ ಗಾಬರಿ ಹುಟ್ಟಿಸುವುದಲ್ಲ. ಬದಲಿಗೆ ಹೆಬ್ಬಾವು ಆರಾಮಾಗಿ ರೆಸ್ಟ್‌ ಮಾಡುತ್ತಿರುವ ವಿಡಿಯೊ.

ಹೌದು, ಐಎಫ್‌ಎಸ್‌ ಅಧಿಕಾರಿ ಸುಶಾಂತ್‌ ನಂದಾ ಅವರು ಹಾಕಿರುವ ಪೋಸ್ಟ್‌ನಲ್ಲಿ ಬೃಹತ್‌ ಹೆಬ್ಬಾವು ಒಂದು ಮೆಲ್ಲಗೆ ಬಂದು ನೀರಿನ ತೊಟ್ಟಿಯಲ್ಲಿ ಹಾಯಾಗಿ ಮಲಗಿದೆ. ತನ್ನ ಹೆಡೆಯನ್ನು ನೀರಿನಲ್ಲಿ ಮುಳುಗಿಸಿ ವಿಶಾಂತ್ರಿ ಪಡೆಯುತ್ತಿರುವ ವಿಡಿಯೊ ವೈರಲ್‌ ಆಗಿದೆ.

ನಂದಾ ಅವರು ಪ್ರಕಾರ, ಹೆಬ್ಬಾವು ಆಗ ತಾನೇ ತನ್ನ ಆಹಾರವನ್ನು ತಿಂದು ವಿಶಾಂತ್ರಿಗೆಂದು ಬಂದಿದೆ ಎಂದು ಹೇಳಿದ್ದಾರೆ. ಈ ವಿಡಿಯೊ ಇದೀಗ ಭಾರಿ ವೈರಲ್‌ ಆಗಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಇನ್ನು ನೂರಾರು ಮಂದಿ ಲೈಕ್‌ ಮಾಡಿದ್ದು, ಹೆಬ್ಬಾವು ವಿಶ್ರಾಂತಿಯಲ್ಲಿ ಯಲ್ಲಿ ಹೇಗಿರುತ್ತದೆ ಎನ್ನುವುದನ್ನು ತೋರಿಸಿದ್ದಕ್ಕೆ ಧನ್ಯವಾದವೆಂದು ನಂದಾ ಅವರಿಗೆ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...