alex Certify 98 ವರ್ಷದ ವೃದ್ದೆ ಕಾರ್ಯಕ್ಕೆ ಸಿಎಂ ಕೂಡಾ ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

98 ವರ್ಷದ ವೃದ್ದೆ ಕಾರ್ಯಕ್ಕೆ ಸಿಎಂ ಕೂಡಾ ಫಿದಾ

ಅಮೃತಸರ: ಆಕೆಯ ವಯಸ್ಸು 98. ಒಂದು ಕಣ್ಣಿನ‌ ದೃಷ್ಟಿ ಇಲ್ಲ. ಆದರೂ ಆಕೆ ಪಂಜಾಬ್ ನ ಸ್ಟ್ರಾಂಗೆಸ್ಟ್ ಕರೋನಾ ವಾರಿಯರ್ ಎಂದು ಹೆಸರು ಪಡೆದಿದ್ದಾರೆ. ಅದು ಹೇಗೆ ಗೊತ್ತಾ..?

ಮೊಂಗಾ ನಗರದ ಗುರುದೇವ ಕೌರ್ ದಿನಕ್ಕೆ 8 ತಾಸು ಮಾಸ್ಕ್ ಹೊಲಿಯುವುದರಲ್ಲಿ ನಿರತರಾಗಿದ್ದಾರೆ. ಅವರ ಮೊಮ್ಮಕ್ಕಳು ಅವರಿಗೆ ಸಹಾಯ ಮಾಡುತ್ತಾರೆ.

“ದಾನ ಮಾಡುವುದು ನಮಗೆ ಇಷ್ಟ. ಅದಕ್ಕಾಗಿ ಈ ಕಾರ್ಯದಲ್ಲಿ ತೊಡಗಿದ್ದೇನೆ.‌ ಮನೆಯಲ್ಲೇ ಇರಿ ಎಂದು ಸರ್ಕಾರ ಹೇಳುತ್ತದೆ. ನಾನು ಅದನ್ನು ಪಾಲಿಸುತ್ತಿದ್ದೇನೆ. ನನಗೆ ಒಂದು ಕಣ್ಣಿನ ದೃಷ್ಟಿ ಇಲ್ಲ. 25 ವರ್ಷದ ಹಿಂದೆ ಇನ್ನೊಂದು ಕಣ್ಣಿಗೆ ಕ್ಯಾಟರ್ಯಾಕ್ಟ್ ಶಸ್ತ್ರ ಚಿಕಿತ್ಸೆಯಾಗಿತ್ತು. ಆದರೂ ಆ ಕಣ್ಣು ಚೆನ್ನಾಗಿ ಕಾಣುತ್ತದೆ” ಎಂದು ಗುರುದೇವ ಕೌರ್ ಹೇಳುತ್ತಾರೆ‌.

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್ ಸಿಂ‌ಗ್, ಕೌರ್ ಅವರ ಕಾರ್ಯವನ್ನು ಶ್ಲಾಘಿಸಿದ್ದು, ಪಂಜಾಬ್ ನ ಅತಿ ಗಟ್ಟಿಯಾದ ಕರೋನಾ ವಾರಿಯರ್ ಎಂದು ಬಣ್ಣಿಸಿದ್ದಾರೆ.‌ ಇಂಥ ನಿಸ್ವಾರ್ಥ ಸೇವೆಯಿಂದ ಪಂಜಾಬ್ ಕರೋನಾ ಎದುರಿಸಲು ಸಮರ್ಥವಾಗಲಿದೆ ಎಂದಿದ್ದಾರೆ.‌

#HumansofOneness #FightAgainstCovid-1998-year old Gurdev Kaur making masks and distributing for freeAmid the…

Posted by Kalgidhar Trust – Baru Sahib on Saturday, April 18, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...