alex Certify 90 ವರ್ಷದ ವೃದ್ಧೆ ಮೇಲೆ ಸಾಮೂಹಿಕ ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

90 ವರ್ಷದ ವೃದ್ಧೆ ಮೇಲೆ ಸಾಮೂಹಿಕ ಅತ್ಯಾಚಾರ

90 ವರ್ಷದ ವೃದ್ಧೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ತ್ರಿಪುರದ ಬಾರ್​ಹಲ್ದಿ ಗ್ರಾಮದಲ್ಲಿ ನಡೆದಿದೆ. ವೃದ್ಧೆಯ ಮನೆಗೆ ನುಗ್ಗಿದ್ದ ಇಬ್ಬರು ಕಾಮುಕರು ಈ ದುಷ್ಕೃತ್ಯ ನಡೆಸಿದ್ದಾರೆ.

ಈ ಸಂಬಂಧ ವೃದ್ಧೆಯ ಕುಟುಂಬಸ್ಥರು ನೀಡಿದ ದೂರನ್ನ ಆಧರಿಸಿ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ ಅಂತಾ ಭಾನುಪದ ಪೊಲೀಸ್​ ಸುಪರಿಟೆಂಡೆಂಟ್​ ಚಕ್ರಬೋರ್ತಿ ಮಾಹಿತಿ ನೀಡಿದ್ರು .

ಆರೋಪಿಗಳಲ್ಲಿ ಒಬ್ಬನು ಈ ವೃದ್ಧೆಯನ್ನ ಅಜ್ಜಿ ಅಂತಲೇ ಕರೆಯುತ್ತಿದ್ದ. ವೃದ್ಧೆ ಮನೆಯಲ್ಲಿ ಏಕಾಂಗಿಯಾಗಿರುವ ವಿಚಾರ ಅರಿತಿದ್ದ ಈತ ಇನ್ನೊಬ್ಬನನ್ನ ಜೊತೆಗೆ ಕರೆದೊಯ್ದು ಈ ಕೃತ್ಯ ಎಸಗಿದ್ದಾನೆ. ಅತ್ಯಾಚಾರದ ಬಳಿಕ ಅಸ್ವಸ್ಥಳಾದ ವೃದ್ಧೆ ಪೊಲೀಸರಿಗೆ ವಿಚಾರ ತಿಳಿಸಿರಲಿಲ್ಲ. ಆದರೆ ಈ ವಿಚಾರ ಸಂಬಂಧಿಕರ ಗಮನಕ್ಕೆ ಬರ್ತಿದ್ದಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

ವೃದ್ಧೆ ಆಸ್ಪತ್ರೆಯಲ್ಲಿದ್ದಾಗಲೇ ಆಕೆಯನ್ನ ಭೇಟಿಯಾಗಿದ್ದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸದ್ಯ ವೃದ್ಧೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...