alex Certify ಒಂದೇ ಕಾಲಿನಲ್ಲಿ ಫುಟ್ಬಾಲ್ ಆಡುವ 9ರ ಪೋರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಕಾಲಿನಲ್ಲಿ ಫುಟ್ಬಾಲ್ ಆಡುವ 9ರ ಪೋರ

ಬದ್ಧತೆ ಹಾಗೂ ಪರಿಶ್ರಮದಿಂದ ಜೀವನದಲ್ಲಿ ಏನೇ ಹಿನ್ನಡೆಯಾದರೂ ಸಹ ನಮ್ಮ ಕನಸನ್ನು ಈಡೇರಿಸಿಕೊಳ್ಳುವುದು ಸಾಧ್ಯ ಎಂದು ಮಣಿಪುರದ ನಾಲ್ಕನೇ ತರಗತಿ ಬಾಲಕನೊಬ್ಬ ತೋರಿಸಿದ್ದಾನೆ.

ಕುನಾಲ್ ಶ್ರೇಷ್ಠ ಎಂಬ ಹೆಸರಿನ ಈ ಬಾಲಕನಿಗೆ ಒಂದು ಕಾಲು ಇಲ್ಲದೇ ಇದ್ದರೂ ಸಹ ಆತನ ಫುಟ್ಬಾಲ್‌ ಕನಸನ್ನು ಕಿತ್ತುಕೊಳ್ಳಲು ಆ ವಿಧಿಯ ಕೈಯಿಂದಲೂ ಸಾಧ್ಯವಾಗಿಲ್ಲ. ಕ್ರಚ್‌ನ ಸಹಾಯದಿಂದ ಈತ ಫುಟ್ಬಾಲ್ ಆಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಷ್ಟು ಮಾತ್ರವಲ್ಲ ಕುನಾಲ್‌ ತನ್ನ ತಾಯಿಗೆ ಮನೆಗೆಲಸಗಳಲ್ಲಿ ಸಹಾಯ ಮಾಡುತ್ತಿದ್ದಾನೆ. ಐಸ್‌ಕ್ರೀಂಗಳು, ಪಾನಿಪುರಿ ಮಾರಿಕೊಂಡು ಜೀವನ ಸಾಗಿಸುವ ತನ್ನ ತಾಯಿಗೆ ತನ್ನ ಕೈಯಲ್ಲಿ ಆದಷ್ಟು ಮಟ್ಟದಲ್ಲಿ ಸಹಾಯ ಮಾಡುತ್ತಿದ್ದಾನೆ ಕುನಾಲ್.

“ನನಗೆ ಫುಟ್ಬಾಲ್ ಆಡುವುದು ಬಹಳ ಇಷ್ಟ. ಮೊದಮೊದಲು ಬ್ಯಾಲೆನ್ಸಿಂಗ್ ಮಾಡುವುದು ಕಷ್ಟವಾಗುತ್ತಿತ್ತು. ಆದರೆ ನನಗೆ ಈಗ ವಿಶ್ವಾಸ ಹೆಚ್ಚಿದೆ. ನನ್ನ ಸ್ನೇಹಿತರು ನನಗೆ ಬಹಳ ಸಹಾಯ ಮಾಡಿದ್ದಾರೆ. ಶೀಘ್ರದಲ್ಲೇ ಗೋಲ್‌ ಗಳಿಸುವೆ ಎಂಬ ವಿಶ್ವಾಸ ನನಗೆ ಇದೆ” ಎಂದು ಕುನಾಲ್ ತಿಳಿಸುತ್ತಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...