alex Certify ವಸತಿ ಪ್ರದೇಶಕ್ಕೆ ಬಂದು ಬೆಚ್ಚಿಬೀಳಿಸಿದ 8 ಅಡಿ ಉದ್ದದ ಮೊಸಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಸತಿ ಪ್ರದೇಶಕ್ಕೆ ಬಂದು ಬೆಚ್ಚಿಬೀಳಿಸಿದ 8 ಅಡಿ ಉದ್ದದ ಮೊಸಳೆ

ಗುಜರಾತ್ ನ ವಡೋದರಲ್ಲಿರುವ ವಸತಿ ಪ್ರದೇಶದಲ್ಲಿ 8 ಅಡಿ ಉದ್ದದ ಮೊಸಳೆ ಸಿಕ್ಕಿದೆ. ಸ್ಥಳೀಯರಲ್ಲಿ ಇದು ಆತಂಕ ಹುಟ್ಟಿಸಿದೆ.

ವಡೋದರದ ಮಂಜಲ್ ಪುರ್ ಎಂಬಲ್ಲಿ ದೈತ್ಯಾಕಾರದ ಮೊಸಳೆ ಕಾಣಿಸಿಕೊಂಡಿದ್ದು, ಅರಣ್ಯಾಧಿಕಾರಿಗಳು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಸ್ಥಳೀಯರು ಆತಂಕದಲ್ಲಿ ಕಾಲ ಕಳೆಯುವಂತಾಗಿತ್ತು.

ಆದರೆ, ಸ್ಥಳೀಯರಾದ ಅಕ್ಷಯ್ ಎಂಬುವರು ಹೇಳುವಂತೆ ಪ್ರತಿ ವರ್ಷ ಮಳೆಗಾಲದಲ್ಲಿ ಮೊಸಳೆಗಳು ಈ ಪ್ರದೇಶದಲ್ಲಿ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಈ ಹಿಂದೆಯೂ ಹಲವು ಬಾರಿ ನೋಡಿದ್ದೇವೆ ಎನ್ನುತ್ತಾರೆ. ಆದರೂ ಪ್ರತಿ ವರ್ಷ ಜನರಲ್ಲಿ ಆತಂಕ, ಭಯ ನಿವಾರಣೆಯಾಗಿಲ್ಲ.

ಅರಣ್ಯಾಧಿಕಾರಿಗಳು ಹೇಳುವ ಪ್ರಕಾರ ಮಳೆಗಾಲದಲ್ಲಿ ಬಂದೇ ಬರುತ್ತವೆ. ನೀರು ಕಡಿಮೆಯಾದಾಗ ಜನರ ಕಣ್ಣಿಗೆ ಕಾಣಿಸಿಕೊಳ್ಳುತ್ತದೆ. ಇದೊಂದು ತಾಂತ್ರಿಕ ಕಾರ್ಯಾಚರಣೆ. ಸದ್ಯಕ್ಕೆ ಹಿಡಿದಿರುವ ಮೊಸಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ವರದಿ ಬಂದ ಬಳಿಕ ಕಾಡಿಗೆ ಬಿಡುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ವಡೋದರದ ಕೇಲನಪುರ್ ಎಂಬಲ್ಲಿಯೂ 7 ಅಡಿ ಉದ್ದದ ಮೊಸಳೆ ರಕ್ಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...