alex Certify 74 ಚಕ್ರ ಹೊಂದಿದ್ದ ಲಾರಿ 1700 ಕಿಮೀ ಕ್ರಮಿಸಲು ತೆಗೆದುಕೊಂಡ ಅವಧಿಯೆಷ್ಟು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

74 ಚಕ್ರ ಹೊಂದಿದ್ದ ಲಾರಿ 1700 ಕಿಮೀ ಕ್ರಮಿಸಲು ತೆಗೆದುಕೊಂಡ ಅವಧಿಯೆಷ್ಟು ಗೊತ್ತಾ…?

74-wheel truck with 70 tonnes of cargo covers 1,700 km to reach ...

74 ಚಕ್ರಗಳನ್ನು ಹೊಂದಿದ್ದ ಬೃಹತ್ ಲಾರಿಯೊಂದು ಬರೋಬ್ಬರಿ 70 ಟನ್ ತೂಕದ ಯಂತ್ರೋಪಕರಣಗಳನ್ನು ಹೊತ್ತು 1700 ಕಿಲೋ ಮೀಟರ್ ದೂರವನ್ನು ಕ್ರಮಿಸಲು ಹತ್ತು ತಿಂಗಳ ಅವಧಿಯನ್ನು ತೆಗೆದುಕೊಂಡಿದೆ.

ಹೌದು, ಈ ಲಾರಿಯಲ್ಲಿ ತಿರುವನಂತಪುರದಲ್ಲಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರಕ್ಕೆ ತಲುಪಿಸಬೇಕಾದ ಮಹತ್ವದ ಯಂತ್ರೋಪಕರಣಗಳಿದ್ದು, ಹೀಗಾಗಿ ಅತ್ಯಂತ ಸುರಕ್ಷಿತ ರೀತಿಯಲ್ಲಿ ಪೊಲೀಸ್ ಬೆಂಗಾವಲಿನೊಂದಿಗೆ ಈ ದೂರವನ್ನು ಕ್ರಮಿಸಿದೆ.

2019ರ ಸೆಪ್ಟೆಂಬರ್ 1ರಂದು ನಾಸಿಕ್ ನಿಂದ ಈ ಲಾರಿ ಪ್ರಯಾಣ ಆರಂಭಿಸಿದ್ದು, ನಗರ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ರಸ್ತೆಯಲ್ಲಿ ಒಂದೇ ಒಂದು ಗುಂಡಿ ಇಲ್ಲದಂತೆ ನೋಡಿಕೊಳ್ಳಲಾಗಿದ್ದು, ಅಲ್ಲದೆ ಯಾವುದೇ ಅಡ್ಡಿಯಾಗದಂತೆ ರಸ್ತೆ ಅಕ್ಕಪಕ್ಕದ ಮರದ ಟೊಂಗೆಗಳನ್ನು ಕತ್ತರಿಸಲಾಗಿತ್ತು.

ಈ ಲಾರಿ ಸಂಚಾರ ನಿಗದಿತ ಅವಧಿಗಿಂತ ಮೂರು ತಿಂಗಳ ವಿಳಂಬಗೊಂಡಿದ್ದು, ಲಾಕ್ ಡೌನ್ ಹೇರಿಕೆ ಇದಕ್ಕೆ ಕಾರಣವೆಂದು ಹೇಳಲಾಗಿದೆ. ಇದೀಗ ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳು ಸುರಕ್ಷಿತವಾಗಿ ತಿರುವನಂತಪುರಕ್ಕೆ ತಲುಪಿವೆ.

Mega Truck With 74 Wheels Took One Year To Travel From Maharashtra ...

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...