ಹರಿಯಾಣದ ಪಂಚಕುಲ ಮಾನ್ಸಾ ದೇವಿ ದೇವಸ್ಥಾನದ ಸಮೀಪದಲ್ಲಿರುವ ಗೋಮಾಳದಲ್ಲಿದ್ದ 70ಕ್ಕೂ ಹೆಚ್ಚು ಹಸುಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು 30ಕ್ಕೂ ಹೆಚ್ಚು ಜಾನುವಾರುಗಳು ಅಸ್ವಸ್ಥಗೊಂಡಿವೆ.
ಪ್ರಕರಣ ಸಂಬಂಧ ಮಾತನಾಡಿದ ಪಶುಸಂಗೋಪನಾ ವಿಭಾಗದ ಉಪನಿರ್ದೇಶಕ ಡಾ. ಅನಿಲ್ ಕುಮಾರ್, ಪಶುಗಳು ಸೇವಿಸಿದ ಮೇವಿನ ಮಾದರಿ ಸಂಗ್ರಹಿಸಲಾಗಿದ್ದು ಪರೀಕ್ಷೆಗೆ ಕಳುಹಿಸಲಿದ್ದೇವೆ. ಅಸ್ವಸ್ಥಗೊಂಡ ಹಸುಗಳಿಗೆ ಚಿಕಿತ್ಸೆ ನೀಡಲಾಗ್ತಾ ಇದ್ದು ಜಾನುವಾರುಗಳು ಚೇತರಿಸಿಕೊಳ್ಳುತ್ತಿವೆ ಅಂತಾ ಹೇಳಿದ್ದಾರೆ.
ವಿದೇಶಗಳಲ್ಲಿ ಕೆಲ ರಾಸುಗಳು ಕೋವಿಡ್ ಸೋಂಕಿಗೆ ತುತ್ತಾದ ಬಗ್ಗೆ ವರದಿಯಾಗಿತ್ತು. ಹೀಗಾಗಿ ಇಲ್ಲಿ ಮೃತಪಟ್ಟ ಹಸುಗಳಿಗೂ ಕೊರೊನಾ ಬಂದಿತ್ತಾ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಪ್ರಾಥಮಿಕ ತನಿಖೆ ವೇಳೆ ಈ ಹಸುಗಳು ದಾನದ ರೂಪದಲ್ಲಿ ಬಂದಿದ್ದ ಹಾಳಾದ ಆಹಾರ ಸೇವಿಸಿದ್ದರಿಂದ ಈ ರೀತಿ ಸಾವನ್ನಪ್ಪಿವೆ ಅಂತಾ ಹೇಳಲಾಗಿದೆ. ಹಸುಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ನಾಳೆಯೊಳಗೆ ವರದಿ ಅಧಿಕಾರಿಗಳ ಕೈ ಸೇರಲಿದೆ.