alex Certify ಅಟಲ್​ ಸುರಂಗದಲ್ಲಿ ಡಾನ್ಸ್ ಮಾಡಿದ ಪ್ರವಾಸಿಗರು ಅಂದರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಟಲ್​ ಸುರಂಗದಲ್ಲಿ ಡಾನ್ಸ್ ಮಾಡಿದ ಪ್ರವಾಸಿಗರು ಅಂದರ್…!

ಈ ವರ್ಷದ ಅಕ್ಟೋಬರ್‌ನಲ್ಲಿ ಉದ್ಘಾಟನೆಯಾದ ನಂತರ ಅಟಲ್ ಸುರಂಗವು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ, ಆದರೆ ದುಷ್ಕರ್ಮಿಗಳನ್ನು ಒಳಗೊಂಡ ಅನೇಕ ಘಟನೆಗಳು ಈ ಸ್ಥಳದಿಂದ ವರದಿಯಾಗಿವೆ.

ಇತ್ತೀಚಿನ ಘಟನೆಯೊಂದರಲ್ಲಿ, ಹಿಮಾಚಲ ಪ್ರದೇಶ ಪೊಲೀಸರು ಕುಲು -ಮನಾಲಿಗೆ ರಸ್ತೆ ಪ್ರಯಾಣದಲ್ಲಿದ್ದ ಏಳು ಜನರನ್ನು ಬಂಧಿಸಿದ್ದಾರೆ. ಈ ಗುಂಪು ತಮ್ಮ ಕಾರುಗಳನ್ನು ರೋಹ್ಟಾಂಗ್‌ನ ಸುರಂಗದ ಮಧ್ಯದಲ್ಲಿ ನಿಲ್ಲಿಸಿ ಫೋಟೋಗಳನ್ನ ತೆಗೆಯುತ್ತಿರುವುದು ಕಂಡುಬಂತು.

ಕೇವಲ ಫೋಟೋ ತೆಗೆದಿದ್ದರೆ ಪೊಲೀಸರು ಏನೂ ಹೇಳುತ್ತಿರಲಿಲ್ಲವೇನೋ ಆದರೆ ಇವರು ಟನಲ್​ ನಲ್ಲೇ ನೃತ್ಯ ಮಾಡುವ ಮೂಲಕ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಈ ಗುಂಪಿನ ಕೃತ್ಯದಿಂದ ಇತರ ವಾಹನ ಸವಾರರಿಗೆ ಅಡಚಣೆಯುಂಟಾಗಿದೆ. ಈ ವಿಡಿಯೋಗಳು ವೈರಲ್​ ಆಗ್ತಿದ್ದಂತೆಯೇ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.

ಅಟಲ್​ ಸುರಂಗದಲ್ಲಿ ವಾಹನ ಸವಾರಿಗೆ ಅಡಚಣೆ ಉಂಟು ಮಾಡಿದ ಹಾಗೂ ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ ಕಾರಣಕ್ಕಾಗಿ ಒಟ್ಟು 15 ಮಂದಿಯನ್ನ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...