ಈ ವರ್ಷದ ಅಕ್ಟೋಬರ್‌ನಲ್ಲಿ ಉದ್ಘಾಟನೆಯಾದ ನಂತರ ಅಟಲ್ ಸುರಂಗವು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ, ಆದರೆ ದುಷ್ಕರ್ಮಿಗಳನ್ನು ಒಳಗೊಂಡ ಅನೇಕ ಘಟನೆಗಳು ಈ ಸ್ಥಳದಿಂದ ವರದಿಯಾಗಿವೆ.
ಇತ್ತೀಚಿನ ಘಟನೆಯೊಂದರಲ್ಲಿ, ಹಿಮಾಚಲ ಪ್ರದೇಶ ಪೊಲೀಸರು ಕುಲು -ಮನಾಲಿಗೆ ರಸ್ತೆ ಪ್ರಯಾಣದಲ್ಲಿದ್ದ ಏಳು ಜನರನ್ನು ಬಂಧಿಸಿದ್ದಾರೆ. ಈ ಗುಂಪು ತಮ್ಮ ಕಾರುಗಳನ್ನು ರೋಹ್ಟಾಂಗ್‌ನ ಸುರಂಗದ ಮಧ್ಯದಲ್ಲಿ ನಿಲ್ಲಿಸಿ ಫೋಟೋಗಳನ್ನ ತೆಗೆಯುತ್ತಿರುವುದು ಕಂಡುಬಂತು.
ಕೇವಲ ಫೋಟೋ ತೆಗೆದಿದ್ದರೆ ಪೊಲೀಸರು ಏನೂ ಹೇಳುತ್ತಿರಲಿಲ್ಲವೇನೋ ಆದರೆ ಇವರು ಟನಲ್ ನಲ್ಲೇ ನೃತ್ಯ ಮಾಡುವ ಮೂಲಕ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಈ ಗುಂಪಿನ ಕೃತ್ಯದಿಂದ ಇತರ ವಾಹನ ಸವಾರರಿಗೆ ಅಡಚಣೆಯುಂಟಾಗಿದೆ. ಈ ವಿಡಿಯೋಗಳು ವೈರಲ್ ಆಗ್ತಿದ್ದಂತೆಯೇ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.
ಅಟಲ್ ಸುರಂಗದಲ್ಲಿ ವಾಹನ ಸವಾರಿಗೆ ಅಡಚಣೆ ಉಂಟು ಮಾಡಿದ ಹಾಗೂ ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ ಕಾರಣಕ್ಕಾಗಿ ಒಟ್ಟು 15 ಮಂದಿಯನ್ನ ಪೊಲೀಸರು ಭಾನುವಾರ ಬಂಧಿಸಿದ್ದಾರೆ.