ಪೊಲೀಸ್ ಸಿಬ್ಬಂದಿಯನ್ನು ಕೊಂದ ಆರೋಪ ಹೊತ್ತ 66 ವರ್ಷದ ವ್ಯಕ್ತಿಯನ್ನು 38 ವರ್ಷಗಳ ನಂತರ ಪೊಲೀಸರು ಬಂಧಿಸಿದ್ದಾರೆ.
ಶಕ್ತಿಧನ್ ಸಿಂಗ್ ಎಂಬಾತನನ್ನು ರಾಜಸ್ತಾನದ ಬಿಜವಾಲ ಗ್ರಾಮದಲ್ಲಿ ಗುಜರಾತ್ ಪೊಲೀಸರು ಬಂಧಿಸಿದ್ದಾರೆ. 1982ರಲ್ಲಿ ಗುಜರಾತ್ ನ ಬನಸ್ಕಂತ ಜಿಲ್ಲೆಯ ಇಕ್ಬಾಲ್ ಗರ ಪ್ರದೇಶದಲ್ಲಿ ಈತ ಇಬ್ಬರು ಪೊಲೀಸರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ.
ಶಕ್ತಿಧನ್ 1980ರ ದಶಕದಲ್ಲಿ ಕುಖ್ಯಾತ ಡಕಾಯಿತನಾಗಿದ್ದು, ಆತನ ಮೇಲೆ ನಲವತ್ತಕ್ಕೂ ಹೆಚ್ವು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.