alex Certify ಒಂದೇ ಕಡೆ ಕ್ಷೌರ ಮಾಡಿಸಿಕೊಂಡ 6 ಜನರಿಗೆ ಕೊರೊನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಕಡೆ ಕ್ಷೌರ ಮಾಡಿಸಿಕೊಂಡ 6 ಜನರಿಗೆ ಕೊರೊನಾ

ಲಾಕ್ ಡೌನ್ ನಡುವೆ ಕ್ಷೌರ ಮಾಡಿಸಿಕೊಳ್ಳಲು ಸಲೂನ್ ಗೆ ತೆರಳಿದ್ದ ಆರು ಜನರಿಗೆ ಈಗ ಕೊರೊನಾ ವೈರಸ್ ತಗುಲಿದೆ. ಮಧ್ಯ ಪ್ರದೇಶದ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಇಡೀ ಗ್ರಾಮವನ್ನು ಈಗ ಲಾಕ್ ಮಾಡಿದ್ದಾರೆ.

ಖಾರ್ಗೋನ್ ಜಿಲ್ಲೆಯ ಭಾರ್ಗಾವ್ ಗ್ರಾಮದ ಸಲೂನ್ ನಲ್ಲಿ ಕ್ಷೌರಿಕ ಆ 6 ಗ್ರಾಹಕರ ಕೂದಲು ಕತ್ತರಿಸಲು ಒಂದೇ ಬಟ್ಟೆಯನ್ನು ಬಳಸಿದ್ದಾರೆ ಎಂಬುದು ಖಚಿತವಾಗಿದೆ.

ಇಂದೋರ್ ನ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇತ್ತೀಚೆಗೆ ತಮ್ಮ‌ಹಳ್ಳಿಯ ಮನೆಗೆ ಬಂದಿದ್ದು, ಕ್ಷೌರ ಮಾಡಿಸಿಕೊಂಡಿದ್ದರು. ನಂತರ ಅವರಿಗೆ ಕೊರೋನಾ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಕ್ಷೌರ ಮಾಡಿಸಿಕೊಂಡ 12 ಮಂದಿಯ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದ್ದು, ಅವರಲ್ಲಿ ಗ್ರಾಮದ ಆರು ಜನರಿಗೆ ಸೋಂಕು ಬಂದಿರುವುದು ಖಚಿತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...