alex Certify Shocking: ಕೊರೊನಾ ಲಸಿಕೆಯನ್ನೂ ಬಿಡಲಿಲ್ಲ ಕಳ್ಳರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಕೊರೊನಾ ಲಸಿಕೆಯನ್ನೂ ಬಿಡಲಿಲ್ಲ ಕಳ್ಳರು…!

ಭಾರತ್​​ ಬಯೋಟೆಕ್​ನ ಕೋವಿಡ್​ 19 ಲಸಿಕೆ ಕೋವ್ಯಾಕ್ಸಿನ್​​ 320 ಡೋಸ್​​ಗಳನ್ನ ಕಳವು ಮಾಡಿದ ಘಟನೆ ಜೈಪುರದ ಆಸ್ಪತ್ರೆಯಲ್ಲಿ ನಡೆದಿದೆ.

ಕೋಲ್ಡ್​ ಸ್ಟೋರೇಜ್​​ನಿಂದ ಲಸಿಕಾ ಕೇಂದ್ರಕ್ಕೆ ಲಸಿಕೆಯನ್ನ ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

1 ಬಾಟಲಿ ಕೋವ್ಯಾಕ್ಸಿನ್​ನಲ್ಲಿ 10 ಡೋಸ್​ಗಳು ಇರುತ್ತವೆ. ಇಂತಹ 32 ಬಾಟಲಿಗಳು ಅಂದರೆ 320 ಡೋಸ್​ಗಳು ಕಣ್ಮರೆಯಾಗಿವೆ. ಜೈಪುರದ ಶಾಸ್ತ್ರಿ ನಗರದ ಕನ್ವತಿಯಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಆಸ್ಪತ್ರೆಯ ಸೂಪರಿಟೆಂಡೆಂಟ್​ ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ದೂರನ್ನ ದಾಖಲಿಸಿದ್ದಾರೆ.

ಇನ್ನು ಈ ಸಂಬಂಧ ಮಾತನಾಡಿದ ಮೆಡಿಕಲ್​ ಆಫೀಸರ್, ಆಸ್ಪತ್ರೆಯಿಂದ 320 ಡೋಸ್​ ಕೊರೊನಾ ಲಸಿಕೆಗಳು ಕಣ್ಮರೆಯಾಗಿವೆ. ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ದೂರನ್ನ ದಾಖಲಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಹೇಳಿದ್ರು.

ಕಳೆದ ವಾರವಷ್ಟೇ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​​ ರಾಜ್ಯದಲ್ಲಿ ಲಸಿಕೆಯ ಅಭಾವದ ಬಗ್ಗೆ ಧ್ವನಿ ಎತ್ತಿದ್ದರು. ರಾಜಸ್ಥಾನದಲ್ಲಿ ಕೊರೊನಾ ಲಸಿಕೆ ಡ್ರೈವ್​ ಮುಂದುವರಿಸಲು ಸಾಕಾಗುವಷ್ಟು ಲಸಿಕೆ ಇಲ್ಲ ಎಂದು ಹೇಳಿದ್ದರು. ಹೀಗಾಗಿ ಈಗಾಗಲೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಲಸಿಕೆ ಡ್ರೈವ್​ ನಿಲ್ಲಿಸಲಾಗಿದೆ ಎಂದೂ ಮಾಹಿತಿ ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...