ಕೋವಿಡ್ 19 ಸೋಂಕಿನ ವಿರುದ್ಧದ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತಿದ್ದ ರೆಮ್ ಡಿಸಿವರ್ ಲಸಿಕೆಗಳನ್ನ ಕಾಳದಂಧೆಯಲ್ಲಿ ಮಾರಾಟ ಮಾಡುತ್ತಿದ್ದ ಮೆಡಿಕಲ್ ಶಾಪ್ ಮಾಲೀಕ ಹಾಗೂ ಇನ್ನಿಬ್ಬರನ್ನ ಮಧ್ಯ ಪ್ರದೇಶದ ಇಂದೋರ್ನಲ್ಲಿ ವಿಶೇಷ ಪೊಲೀಸ್ ಪಡೆ ಗುರುವಾರ ಬಂಧಿಸಿದೆ.
ಬಂಧಿತರನ್ನ ರಾಜೇಶ್ ಪಟಿದರ್, ಜ್ಞಾನೇಶ್ವರ ಬರಸ್ಕರ್ ಹಾಗೂ ಅನುರಾಗ್ ಸಿಂಗ್ ಸಿಸೋಡಿಯಾ ಎಂದು ಗುರುತಿಸಲಾಗಿದೆ ಅಂತಾ ಹಿರಿಯ ಪೊಲೀಸ್ ಅಧಿಕಾರಿ ಮನೀಷ್ ಖತ್ರಿ ಮಾಹಿತಿ ನೀಡಿದ್ರು.
ಬಂಧಿತರಿಂದ ಪೊಲೀಸರು ಲಸಿಕೆಯ 12 ಬಾಟಲಿಗಳನ್ನ ವಶಕ್ಕೆ ಪಡೆದಿದ್ದಾರೆ. ಈ ಬಾಟಲಿಗಳ ಮೇಲೆ ರಫ್ತಿಗೆ ಮಾತ್ರ ಎಂಬ ಪ್ರಿಂಟ್ ಹಾಕಲಾಗಿದೆ ಎಂದು ಖತ್ರಿ ತಿಳಿಸಿದ್ರು.
ಇದರಲ್ಲಿ ಗರಿಷ್ಟ ಮಾರಾಟ ದರವನ್ನ ನಮೂದಿಸಿರಲಿಲ್ಲ. ಆದರೆ ಈ ಆರೋಪಿಗಳು ಪ್ರತಿ ಇಂಜೆಕ್ಷನ್ಗೆ 20 ಸಾವಿರ ರೂಪಾಯಿ ದರ ಫಿಕ್ಸ್ ಮಾಡಿದ್ದರು ಎನ್ನಲಾಗಿದೆ. ಸಿಸೋಡಿಯಾ ಮೆಡಿಕಲ್ ಶಾಪ್ ಮಾಲೀಕರಾಗಿದ್ರೆ, ಪಟಿದರ್ ಮೆಡಿಕಲ್ ರೆಪ್ ಆಗಿ ಸೇವೆ ಸಲ್ಲಿಸುತ್ತಿದ್ದ ಎನ್ನಲಾಗಿದೆ.