alex Certify Shocking News: ಕಾಳಸಂತೆಯಲ್ಲಿ 20 ಸಾವಿರ ರೂ. ಗಳಿಗೆ ಮಾರಾಟವಾಗ್ತಿತ್ತು ರೆಮ್ ಡಿಸಿವರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking News: ಕಾಳಸಂತೆಯಲ್ಲಿ 20 ಸಾವಿರ ರೂ. ಗಳಿಗೆ ಮಾರಾಟವಾಗ್ತಿತ್ತು ರೆಮ್ ಡಿಸಿವರ್…!

ಕೋವಿಡ್​ 19 ಸೋಂಕಿನ ವಿರುದ್ಧದ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತಿದ್ದ ರೆಮ್ ಡಿಸಿವರ್​​ ಲಸಿಕೆಗಳನ್ನ ಕಾಳದಂಧೆಯಲ್ಲಿ ಮಾರಾಟ ಮಾಡುತ್ತಿದ್ದ ಮೆಡಿಕಲ್​ ಶಾಪ್​ ಮಾಲೀಕ ಹಾಗೂ ಇನ್ನಿಬ್ಬರನ್ನ ಮಧ್ಯ ಪ್ರದೇಶದ ಇಂದೋರ್​ನಲ್ಲಿ ವಿಶೇಷ ಪೊಲೀಸ್​​ ಪಡೆ ಗುರುವಾರ ಬಂಧಿಸಿದೆ.‌

ಬಂಧಿತರನ್ನ ರಾಜೇಶ್​ ಪಟಿದರ್​, ಜ್ಞಾನೇಶ್ವರ ಬರಸ್ಕರ್​ ಹಾಗೂ ಅನುರಾಗ್​ ಸಿಂಗ್​ ಸಿಸೋಡಿಯಾ ಎಂದು ಗುರುತಿಸಲಾಗಿದೆ ಅಂತಾ ಹಿರಿಯ ಪೊಲೀಸ್​ ಅಧಿಕಾರಿ ಮನೀಷ್​ ಖತ್ರಿ ಮಾಹಿತಿ ನೀಡಿದ್ರು.

ಬಂಧಿತರಿಂದ ಪೊಲೀಸರು ಲಸಿಕೆಯ 12 ಬಾಟಲಿಗಳನ್ನ ವಶಕ್ಕೆ ಪಡೆದಿದ್ದಾರೆ. ಈ ಬಾಟಲಿಗಳ ಮೇಲೆ ರಫ್ತಿಗೆ ಮಾತ್ರ ಎಂಬ ಪ್ರಿಂಟ್​ ಹಾಕಲಾಗಿದೆ ಎಂದು ಖತ್ರಿ ತಿಳಿಸಿದ್ರು.

ಇದರಲ್ಲಿ ಗರಿಷ್ಟ ಮಾರಾಟ ದರವನ್ನ ನಮೂದಿಸಿರಲಿಲ್ಲ. ಆದರೆ ಈ ಆರೋಪಿಗಳು ಪ್ರತಿ ಇಂಜೆಕ್ಷನ್​ಗೆ 20 ಸಾವಿರ ರೂಪಾಯಿ ದರ ಫಿಕ್ಸ್ ಮಾಡಿದ್ದರು ಎನ್ನಲಾಗಿದೆ. ಸಿಸೋಡಿಯಾ ಮೆಡಿಕಲ್​ ಶಾಪ್​ ಮಾಲೀಕರಾಗಿದ್ರೆ, ಪಟಿದರ್​ ಮೆಡಿಕಲ್​ ರೆಪ್​ ಆಗಿ ಸೇವೆ ಸಲ್ಲಿಸುತ್ತಿದ್ದ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...