alex Certify ನಕಲಿ ನೋಟುಗಳನ್ನ ಬ್ಯಾಂಕ್​ ನಲ್ಲಿ ಜಮಾವಣೆ ಮಾಡಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕಲಿ ನೋಟುಗಳನ್ನ ಬ್ಯಾಂಕ್​ ನಲ್ಲಿ ಜಮಾವಣೆ ಮಾಡಿದ ಮಹಿಳೆ

ಧಾನ್ಯ ಮಾರಾಟ ಮಾಡುವ ಉದ್ಯಮ ನಡೆಸುತ್ತಿದ್ದ ಮಹಿಳೆ ಬ್ಯಾಂಕ್​ನಲ್ಲಿ ನಕಲಿ ನೋಟ್​ಗಳನ್ನ ಜಮಾವಣೆ ಮಾಡಿದ ಘಟನೆ ಚೆನ್ನೈ​​ನಲ್ಲಿ ನಡೆದಿದೆ. ಮಹಿಳೆಯನ್ನ ತಿರುವೊಟ್ಟಿಯೂರಿನ 27 ವರ್ಷದ ವಿಜಯಲಕ್ಷ್ಮೀ ಎಂದು ಗುರುತಿಸಲಾಗಿದೆ. ಈಕೆ ಎದಪಲಯಂ ಶಾಖೆಯಲ್ಲಿ ಮೂರು ಲಕ್ಷ ರೂಪಾಯಿ ಜಮಾವಣೆ ಮಾಡಿದ್ದರು.

ಬ್ಯಾಂಕ್​ ಸಿಬ್ಬಂದಿ ನಗದನ್ನು ಪರೀಕ್ಷೆಗೆ ಒಳಪಡಿಸಿದ ವೇಳೆ ಶಾಕ್​ ಆಗಿದ್ದಾರೆ. ಈ ಮೂರು ಲಕ್ಷ ರೂಪಾಯಿ ನಗದಿನಲ್ಲಿ 26,800 ರೂಪಾಯಿ ಮೌಲ್ಯದ ಇನ್ನೂರು ರೂಪಾಯಿ ಮುಖಬೆಲೆಯ ನಕಲಿ ನೋಟುಗಳಿರೋದು ಕಂಡು ಬಂದಿದೆ. ಈ ಬಗ್ಗೆ ಪೊಲೀಸರಿಗೆ ಬ್ಯಾಂಕ್​ ಸಿಬ್ಬಂದಿ ದೂರನ್ನ ನೀಡಿದ್ದಾರೆ.

ಮಧುರೈನಲ್ಲಿರುವ ಮಹಿಳೆಗೆ ರೆಡ್​ ಹಿಲ್ಸ್ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಈ ಕೇಸನ್ನ ಸಿಸಿಬಿಗೆ ಹಸ್ತಾಂತರ ಮಾಡುವ ಪ್ರಕ್ರಿಯೆಗಳು ನಡೆಯುತ್ತಿವೆ. ಮಹಿಳೆ ಉದ್ದೇಶಪೂರ್ವಕವಾಗಿ ನಕಲಿ ನೋಟುಗಳನ್ನ ಬ್ಯಾಂಕಿಗೆ ನೀಡಿದ್ದಳೋ ಇಲ್ಲವೇ ಯಾರೋ ಈಕೆಗೇ ಮೋಸ ಮಾಡಿದ್ದರೋ ಎಂಬ ವಿಚಾರ ತನಿಖೆ ಬಳಿಕ ಹೊರಬರಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...