ಧಾನ್ಯ ಮಾರಾಟ ಮಾಡುವ ಉದ್ಯಮ ನಡೆಸುತ್ತಿದ್ದ ಮಹಿಳೆ ಬ್ಯಾಂಕ್ನಲ್ಲಿ ನಕಲಿ ನೋಟ್ಗಳನ್ನ ಜಮಾವಣೆ ಮಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಮಹಿಳೆಯನ್ನ ತಿರುವೊಟ್ಟಿಯೂರಿನ 27 ವರ್ಷದ ವಿಜಯಲಕ್ಷ್ಮೀ ಎಂದು ಗುರುತಿಸಲಾಗಿದೆ. ಈಕೆ ಎದಪಲಯಂ ಶಾಖೆಯಲ್ಲಿ ಮೂರು ಲಕ್ಷ ರೂಪಾಯಿ ಜಮಾವಣೆ ಮಾಡಿದ್ದರು.
ಬ್ಯಾಂಕ್ ಸಿಬ್ಬಂದಿ ನಗದನ್ನು ಪರೀಕ್ಷೆಗೆ ಒಳಪಡಿಸಿದ ವೇಳೆ ಶಾಕ್ ಆಗಿದ್ದಾರೆ. ಈ ಮೂರು ಲಕ್ಷ ರೂಪಾಯಿ ನಗದಿನಲ್ಲಿ 26,800 ರೂಪಾಯಿ ಮೌಲ್ಯದ ಇನ್ನೂರು ರೂಪಾಯಿ ಮುಖಬೆಲೆಯ ನಕಲಿ ನೋಟುಗಳಿರೋದು ಕಂಡು ಬಂದಿದೆ. ಈ ಬಗ್ಗೆ ಪೊಲೀಸರಿಗೆ ಬ್ಯಾಂಕ್ ಸಿಬ್ಬಂದಿ ದೂರನ್ನ ನೀಡಿದ್ದಾರೆ.
ಮಧುರೈನಲ್ಲಿರುವ ಮಹಿಳೆಗೆ ರೆಡ್ ಹಿಲ್ಸ್ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಈ ಕೇಸನ್ನ ಸಿಸಿಬಿಗೆ ಹಸ್ತಾಂತರ ಮಾಡುವ ಪ್ರಕ್ರಿಯೆಗಳು ನಡೆಯುತ್ತಿವೆ. ಮಹಿಳೆ ಉದ್ದೇಶಪೂರ್ವಕವಾಗಿ ನಕಲಿ ನೋಟುಗಳನ್ನ ಬ್ಯಾಂಕಿಗೆ ನೀಡಿದ್ದಳೋ ಇಲ್ಲವೇ ಯಾರೋ ಈಕೆಗೇ ಮೋಸ ಮಾಡಿದ್ದರೋ ಎಂಬ ವಿಚಾರ ತನಿಖೆ ಬಳಿಕ ಹೊರಬರಬೇಕಿದೆ.