ಕೃಷಿ ಮಸೂದೆಯನ್ನ ಖಂಡಿಸಿ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ವಿವಾದಾತ್ಮ ಟ್ವೀಟ್ಗಳನ್ನ ಹರಿಬಿಡುವವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ.
ಐಟಿ ಸಚಿವಾಲಯ 250 ಟ್ವೀಟರ್ ಖಾತೆಗಳನ್ನ ಅಮಾನತು ಮಾಡುವಂತೆ ನಿರ್ದೇಶನ ನೀಡಿದೆ. ಐಟಿ ಸಚಿವಾಲಯದ ಆದೇಶ ಬಂದ ಕೆಲವೇ ಹೊತ್ತಿನಲ್ಲಿ ಈ ಎಲ್ಲಾ ಟ್ವಿಟರ್ ಖಾತೆಗಳನ್ನ ಅಮಾನತು ಮಾಡಲಾಗಿದೆ.
#ModiPlanningFarmerGenocide ಎಂಬ ಹ್ಯಾಶ್ ಟ್ಯಾಗ್ ಬಳಕೆ ಮಾಡಿಕೊಂಡು ಪ್ರಧಾನಿ ವಿರುದ್ಧ ಟ್ವೀಟ್ಗಳನ್ನ ಹರಿಬಿಡಲಾಗುತ್ತಿತ್ತು. ಶನಿವಾರದಿಂದ ಈ ಹ್ಯಾಶ್ಟ್ಯಾಗ್ ಟ್ವಿಟರ್ನಲ್ಲಿ ಭಾರೀ ಸದ್ದು ಮಾಡುತ್ತಿತ್ತು. ಗೃಹ ಸಚಿವಾಲಯದ ಮಾಹಿತಿಯನ್ನ ಆಧರಿಸಿ ಐಟಿ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.
ಲಡಾಖ್ನಲ್ಲಿ ಕೇಂದ್ರ ವಿಶ್ವ ವಿದ್ಯಾಲಯ ಸ್ಥಾಪನೆಗೆ ಅಸ್ತು
ಕಾರಂವಾ ಮಾಗ್ಯಾಜಿನ್ ಹಾಗೂ ಸುಶಾಂತ್ ಸಿಂಹ್ರ ಟ್ವಿಟರ್ ಖಾತೆಗಳಿಗೆ ತಡೆ ಹಿಡಿಯಲಾಗಿದೆ. ಕಾರಂವಾ ಮ್ಯಾಗಜಿನ್ ಟ್ವಿಟರ್ ಖಾತೆಯಲ್ಲಿ ಸುಳ್ಳು ಸುದ್ದಿ ಪೋಸ್ಟ್ ಮಾಡಿರುವ ಆರೋಪದಡಿಯಲ್ಲಿ ದೆಹಲಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಹಾಗೂ ಸುಶಾಂತ್ ಸಿಂಹ ಪದೇ ಪದೇ ರೈತರ ಪ್ರತಿಭಟನೆ ಪರವಾಗಿ ಟ್ವೀಟ್ಗಳನ್ನ ಮಾಡುತ್ತಲೇ ಇದ್ದರು. ಅಲ್ಲದೇ ಟ್ವಿಟರ್ ಖಾತೆ ಮೂಲಕ ಜನರಿಗೆ ಸುಳ್ಳು ಸುದ್ದಿಗಳನ್ನ ಹಬ್ಬಿಸುತ್ತಿದ್ದರು. ಪ್ರಸಾರ ಭಾರತಿಯ ಸಿಇಒ ಟ್ವಿಟರ್ ಖಾತೆಗೂ ತಡೆ ಹಿಡಿಯಲಾಗಿದೆ. ಈ ಸಂಬಂಧ ಪ್ರಸಾರ ಭಾರತಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸ್ಪಷ್ಟನೆ ಕೇಳಿದೆ.