
ತನ್ನ ತಂದೆಗೆ ತ್ವರಿತ ವೈದ್ಯಕೀಯ ನೆರವು ಸಿಗುವ ಯಾವುದೇ ಆಶಾಭಾವನೆ ಇಲ್ಲದೇ ಇದ್ದ ಕಾರಣ ಬಿಹಾರದ 25 ವರ್ಷ ವಯಸ್ಸಿನ ವೈದ್ಯರೊಬ್ಬರು ತಮ್ಮ ತಂದೆಯನ್ನು 450 ಕಿಮೀನಷ್ಟು ದೂರಕ್ಕೆ ಕಾರಿನಲ್ಲೇ ಡ್ರೈವ್ ಮಾಡಿಕೊಂಡು ಲಖನೌನಲ್ಲಿರುವ ಡಿಆರ್‌ಡಿಓ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವೈರಲ್ ಮೀಮ್ ಆಯ್ತು ಅಮೃತಾ ರಾವ್ ರ ಈ ʼಸೀನ್ʼ
ಮೊಹಮ್ಮದ್ ಹಮೀಂ ಹೆಸರಿನ 63 ವರ್ಷ ವಯಸ್ಸಿನ ಈ ಪೇಷಂಟ್‌ಗೆ ಆಮ್ಲಜನಕದ ಸಂತೃಪ್ತಿಯ ಮಟ್ಟ 75% ತಲುಪಿದ್ದಲ್ಲದೇ, ಸಕ್ಕರೆ ಪ್ರಮಾಣವು 600 ಎಂಎಂ/ಲೀನಷ್ಟಕ್ಕೆ ಏರಿತ್ತು. ಆದರೂ ಸಹ ತನ್ನ ಜಿಲ್ಲಾ ಕೇಂದ್ರ ಗೋಪಾಲ್‌ಗಂಜ್ ಹಾಗೂ ರಾಜಧಾನಿ ಪಟನಾದಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೇ ಇದ್ದ ಕಾರಣ ಪೇಷೆಂಟ್‌ನ ಪುತ್ರ ಯೂಸುಫ್ ಇಕ್ಬಾಲ್ ಅವರನ್ನು ಲಖನೌಗೆ ಕರೆತಂದಿದ್ದಾರೆ.
ಶಬ್ದ ಮಾಲಿನ್ಯ ಮಾಡಿದ್ರೆ ಈ ರಾಜ್ಯದಲ್ಲಿ ವಿಧಿಸಲಾಗುತ್ತೆ ಭಾರೀ ದಂಡ…..!
ಹಮೀಂ ಈಗ ಚೇತರಿಸಿಕೊಂಡಿದ್ದು, ತಮ್ಮನ್ನು ಶುಶ್ರೂಷೆ ಮಾಡಿದ ವೈದ್ಯರು, ನರ್ಸ್‌ಗಳು ಹಾಗೂ ಪ್ಯಾರಾಮೆಡಿಕ್ಸ್‌ಗೆ ಡಾ. ಇಕ್ಬಾಲ್ ಧನ್ಯವಾದದ ನೋಟ್ ಬರೆದಿದ್ದಾರೆ.
