alex Certify ಈತನ ಹೊಟ್ಟೆಯಲ್ಲಿದ್ದ ಗಡ್ಡೆ ನೋಡಿ ದಂಗಾದ ವೈದ್ಯರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈತನ ಹೊಟ್ಟೆಯಲ್ಲಿದ್ದ ಗಡ್ಡೆ ನೋಡಿ ದಂಗಾದ ವೈದ್ಯರು…!

ವ್ಯಕ್ತಿಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 24 ಕೆಜಿ ತೂಕದ ಗಡ್ಡೆಯನ್ನ ತೆಗೆದು ಹಾಕುವಲ್ಲಿ ಉತ್ತರ ಪ್ರದೇಶದ ಆಲಿಘರ್​ ಜಿಲ್ಲೆಯ ಜವಹರಲಾಲ್​ ನೆಹರೂ ವಿಶ್ವವಿದ್ಯಾಲಯದ ವೈದ್ಯರು ಯಶಸ್ವಿಯಾಗಿದ್ದಾರೆ.

ಆಲಿಘರ್​ ಜಿಲ್ಲೆಯ ಚರ್ರಾ ನಿವಾಸಿ 45 ವರ್ಷದ ಸೀತಾರಾಮ್​ ಎಂಬವರು ಈ ಭಾರೀ ಗಾತ್ರದ ಗಡ್ಡೆಯನ್ನ ತಮ್ಮ ಹೊಟ್ಟೆಯಲ್ಲಿ ಬರೋಬ್ಬರಿ ಒಂದೂವರೆ ವರ್ಷಗಳ ಕಾಲ ಇರಿಸಿಕೊಂಡಿದ್ರು.

ಫ್ರೋ. ಸಯ್ಯದ್​​ ಹಾಸನ್​ ಹ್ಯಾರಿಸ್​ ಹಾಗೂ ಡಾ. ಶಹಬಾಜ್​​ ಹಬೀಬ್​​ ಫಾರಿದಿ ನೇತೃತ್ವದಲ್ಲಿ ಈ ಗಡ್ಡೆಯನ್ನ ತೆಗೆದುಹಾಕಲಾಗಿದೆ.

ಈ ಆಪರೇಷನ್​ ಬಳಿಕ ಮಾತನಾಡಿದ ಪ್ರೋ. ಸಯ್ಯದ್​ ಹಾಸನ್​ ಹ್ಯಾರಿಸ್​, 2018ರಿಂದ ಸೀತಾರಾಮ್​ ಈ ಗಡ್ಡೆ ಸಮಸ್ಯೆಯಿಂದಾಗಿ ಅಸ್ವಸ್ಥರಾಗಿದ್ದರು. ಅವರಿಗೆ ಪದೇ ಪದೇ ಹೊಟ್ಟೆನೋವು ಕಾಣಿಸಿಕೊಳ್ತಿತ್ತು. ಆದರೆ ವಿವಿಧ ಮಾತ್ರೆಗಳನ್ನ ಸೇವಿಸಿ ಅವರು ಕ್ಷಣಿಕವಾಗಿ ಆರಾಮಾಗುತ್ತಿದ್ದರು. ಆದರೆ ನಮ್ಮ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಭಾರೀ ಗಾತ್ರದ ಗಡ್ಡೆ ಇರೋದು ಬೆಳಕಿಗೆ ಬಂದಿದ್ದು ನಾವು ಅದನ್ನ ಆಪರೇಷನ್​ ಮಾಡಿ ತೆಗೆದು ಹಾಕಿದ್ದೇವೆ ಅಂತಾ ಮಾಹಿತಿ ನೀಡಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...