ವ್ಯಕ್ತಿಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 24 ಕೆಜಿ ತೂಕದ ಗಡ್ಡೆಯನ್ನ ತೆಗೆದು ಹಾಕುವಲ್ಲಿ ಉತ್ತರ ಪ್ರದೇಶದ ಆಲಿಘರ್ ಜಿಲ್ಲೆಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವೈದ್ಯರು ಯಶಸ್ವಿಯಾಗಿದ್ದಾರೆ.
ಆಲಿಘರ್ ಜಿಲ್ಲೆಯ ಚರ್ರಾ ನಿವಾಸಿ 45 ವರ್ಷದ ಸೀತಾರಾಮ್ ಎಂಬವರು ಈ ಭಾರೀ ಗಾತ್ರದ ಗಡ್ಡೆಯನ್ನ ತಮ್ಮ ಹೊಟ್ಟೆಯಲ್ಲಿ ಬರೋಬ್ಬರಿ ಒಂದೂವರೆ ವರ್ಷಗಳ ಕಾಲ ಇರಿಸಿಕೊಂಡಿದ್ರು.
ಫ್ರೋ. ಸಯ್ಯದ್ ಹಾಸನ್ ಹ್ಯಾರಿಸ್ ಹಾಗೂ ಡಾ. ಶಹಬಾಜ್ ಹಬೀಬ್ ಫಾರಿದಿ ನೇತೃತ್ವದಲ್ಲಿ ಈ ಗಡ್ಡೆಯನ್ನ ತೆಗೆದುಹಾಕಲಾಗಿದೆ.
ಈ ಆಪರೇಷನ್ ಬಳಿಕ ಮಾತನಾಡಿದ ಪ್ರೋ. ಸಯ್ಯದ್ ಹಾಸನ್ ಹ್ಯಾರಿಸ್, 2018ರಿಂದ ಸೀತಾರಾಮ್ ಈ ಗಡ್ಡೆ ಸಮಸ್ಯೆಯಿಂದಾಗಿ ಅಸ್ವಸ್ಥರಾಗಿದ್ದರು. ಅವರಿಗೆ ಪದೇ ಪದೇ ಹೊಟ್ಟೆನೋವು ಕಾಣಿಸಿಕೊಳ್ತಿತ್ತು. ಆದರೆ ವಿವಿಧ ಮಾತ್ರೆಗಳನ್ನ ಸೇವಿಸಿ ಅವರು ಕ್ಷಣಿಕವಾಗಿ ಆರಾಮಾಗುತ್ತಿದ್ದರು. ಆದರೆ ನಮ್ಮ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಭಾರೀ ಗಾತ್ರದ ಗಡ್ಡೆ ಇರೋದು ಬೆಳಕಿಗೆ ಬಂದಿದ್ದು ನಾವು ಅದನ್ನ ಆಪರೇಷನ್ ಮಾಡಿ ತೆಗೆದು ಹಾಕಿದ್ದೇವೆ ಅಂತಾ ಮಾಹಿತಿ ನೀಡಿದ್ರು.