ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಗಣನೀಯ ಏರಿಕೆ ಕಾಣುತ್ತಿರುವ ಬೆನ್ನಲ್ಲೇ ರಾಜ್ಯದ ವಾಶಿಮ್ ಜಿಲ್ಲೆಯ ಹಾಸ್ಟೆಲ್ ಒಂದರಲ್ಲಿ ಬರೋಬ್ಬರಿ 229 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.
ಹಾಸ್ಟೆಲ್ನಲ್ಲಿ ಒಟ್ಟು 327 ವಿದ್ಯಾರ್ಥಿಗಳಿದ್ದು ಈ ಪೈಕಿ 39 ಮಂದಿ ಈ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ರು, ಬುಧವಾರ ಇನ್ನೂ 190 ಮಂದಿ ಸೋಂಕಿಗೆ ಗುರಿಯಾಗಿದ್ದು ಈ ಮೂಲಕ ಹಾಸ್ಟೆಲ್ನ ಒಟ್ಟು 229 ಮಂದಿ ಕೋವಿಡ್ 19 ಸೋಂಕಿಗೆ ಒಳಗಾದಂತಾಗಿದೆ.
ಇಂದು ಕೊರೊನಾ ಪಾಸಿಟಿವ್ ವರದಿ ಪಡೆದ 190 ಮಂದಿಯಲ್ಲಿ ನಾಲ್ವರು ಸಿಬ್ಬಂದಿ ಕೂಡ ಸೇರಿದ್ದಾರೆ. ಸೋಂಕಿತ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಅಮರಾವತಿ ಹಾಗೂ ಯವತ್ಮಾಲ್ ಮೂಲದವರು ಎಂದು ತಿಳಿದು ಬಂದಿದೆ. ಮಹಾರಾಷ್ಟ್ರದ ಈ ಎರಡು ಜಿಲ್ಲೆಗಳು ಕೊರೊನಾದಿಂದ ಹೆಚ್ಚು ಪರಿಣಾಮವನ್ನ ಎದುರಿಸುತ್ತಿವೆ.
ಇದೀಗ ಈ ಹಾಸ್ಟೆಲ್ ಇರುವ ವಾಶಿಮ್ ಜಿಲ್ಲೆಯ ರಿಸೋಡ್ ನಗರದ ಡಿಯೋ ಗಾಂವ್ ಗ್ರಾಮ್ವನ್ನ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಅಲ್ಲದೇ ವಾಶಿಮ್ನ ಎಲ್ಲಾ ಸಾರಿಗೆ ವಾಹನಗಳಿಗೆ ಪಕ್ಕದ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.