alex Certify ಶಾಕಿಂಗ್​: ಒಂದೇ ಹಾಸ್ಟೆಲ್​​ನಲ್ಲಿದ್ದ ಬರೋಬ್ಬರಿ 229 ಮಂದಿಗೆ ಕೊರೊನಾ ಸೋಂಕು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಒಂದೇ ಹಾಸ್ಟೆಲ್​​ನಲ್ಲಿದ್ದ ಬರೋಬ್ಬರಿ 229 ಮಂದಿಗೆ ಕೊರೊನಾ ಸೋಂಕು….!

ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಗಣನೀಯ ಏರಿಕೆ ಕಾಣುತ್ತಿರುವ ಬೆನ್ನಲ್ಲೇ ರಾಜ್ಯದ ವಾಶಿಮ್​ ಜಿಲ್ಲೆಯ ಹಾಸ್ಟೆಲ್​ ಒಂದರಲ್ಲಿ ಬರೋಬ್ಬರಿ 229 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

ಹಾಸ್ಟೆಲ್​​ನಲ್ಲಿ ಒಟ್ಟು 327 ವಿದ್ಯಾರ್ಥಿಗಳಿದ್ದು ಈ ಪೈಕಿ 39 ಮಂದಿ ಈ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ರು, ಬುಧವಾರ ಇನ್ನೂ 190 ಮಂದಿ ಸೋಂಕಿಗೆ ಗುರಿಯಾಗಿದ್ದು ಈ ಮೂಲಕ ಹಾಸ್ಟೆಲ್​​ನ ಒಟ್ಟು 229 ಮಂದಿ ಕೋವಿಡ್​ 19 ಸೋಂಕಿಗೆ ಒಳಗಾದಂತಾಗಿದೆ.

ಇಂದು ಕೊರೊನಾ ಪಾಸಿಟಿವ್​​ ವರದಿ ಪಡೆದ 190 ಮಂದಿಯಲ್ಲಿ ನಾಲ್ವರು ಸಿಬ್ಬಂದಿ ಕೂಡ ಸೇರಿದ್ದಾರೆ. ಸೋಂಕಿತ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಅಮರಾವತಿ ಹಾಗೂ ಯವತ್ಮಾಲ್​ ಮೂಲದವರು ಎಂದು ತಿಳಿದು ಬಂದಿದೆ. ಮಹಾರಾಷ್ಟ್ರದ ಈ ಎರಡು ಜಿಲ್ಲೆಗಳು ಕೊರೊನಾದಿಂದ ಹೆಚ್ಚು ಪರಿಣಾಮವನ್ನ ಎದುರಿಸುತ್ತಿವೆ.
ಇದೀಗ ಈ ಹಾಸ್ಟೆಲ್​ ಇರುವ ವಾಶಿಮ್​ ಜಿಲ್ಲೆಯ ರಿಸೋಡ್​ ನಗರದ ಡಿಯೋ ಗಾಂವ್​ ಗ್ರಾಮ್​ವನ್ನ ಕಂಟೈನ್ಮೆಂಟ್​ ಝೋನ್​ ಎಂದು ಘೋಷಿಸಲಾಗಿದೆ. ಅಲ್ಲದೇ ವಾಶಿಮ್​ನ ಎಲ್ಲಾ ಸಾರಿಗೆ ವಾಹನಗಳಿಗೆ ಪಕ್ಕದ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...