ನಾಸಿಕ್: ಮಹಾರಾಷ್ಟ್ರದ ನಾಸಿಕ್ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಟ್ಯಾಂಕ್ ಸೋರಿಕೆಯಾದ ಪರಿಣಾಮ 10ಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ನಾಸಿಕ್ ನ ಜಾಕೀರ್ ಹುಸೇನ್ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. ಆಕ್ಸಿಜನ್ ಸೋರಿಕೆಯಿಂದಾಗಿ ರೋಗಿಗಳಿಗೆ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾಗಿ 10ಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪಿದ್ದಾರೆ. ಮೃತ ರೋಗಿಗಳು ಕೊರೊನಾ ಸೋಂಕಿತರು ಎನ್ನಲಾಗಿದೆ.
ವಿಶಿಷ್ಟವಾಗಿ ʼಮಾʼsk ಮಹತ್ವ ಸಾರಿದ ಮುಂಬೈ ಪೊಲೀಸ್
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ. ಇದೊಂದು ದುರದೃಷ್ಟಕರ ಘಟನೆ ಎಂದು ಆರೋಗ್ಯ ಮತ್ತು ಔಷಧಿ ಪ್ರಾಧಿಕಾರದ ಸಚಿವ ಡಾ.ರಾಜೇಂದ್ರ ಶಿಂಗಾನೆ ತಿಳಿಸಿದ್ದಾರೆ.