ನೀವು ಈ ತಿಂಗಳ ಕ್ಯಾಲೆಂಡರ್ನ್ನು ಸರಿಯಾಗಿ ಗಮನಿಸಿದ್ದೀರಾ..? ಫೆಬ್ರವರಿ ತಿಂಗಳ ಕ್ಯಾಲೆಂಡರ್ನಲ್ಲಿರುವ ವಿಶೇಷತೆ ಬಗ್ಗೆ ನಿಮಗೇನಾದರೂ ಗಮನಕ್ಕೆ ಬಂತಾ..?
2021 ಅಧಿಕ ವರ್ಷವಂತೂ ಅಲ್ಲ. ಫೆಬ್ರವರಿಯಲ್ಲಿ 28 ದಿನಗಳು ಮಾತ್ರ ಇದೆ. ಆದರೆ ಈ ದಿನಾಂಕಗಳನ್ನ ನೋಡ್ತಿದ್ರೆ ವಿಶೇಷ ಅಂತಾ ಅನಿಸೋದಂತೂ ಸಹಜ.
ಈ ಬಾರಿಯ ಫೆಬ್ರವರಿ ತಿಂಗಳ ದಿನಾಂಕಗಳು ಆಯಾತಾಕಾರದಲ್ಲಿದೆ. ಫೆಬ್ರವರಿ ತಿಂಗಳ ಮೊದಲನೇ ದಿನ ಸೋಮವಾರ ಬಂದಿದ್ದರಿಂದ ಈ ರೀತಿ ಆಯಾತಾಕಾರ ಮೂಡೋಕೆ ಸಾಧ್ಯವಾಗಿದೆ.
ಇನ್ನು ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಜನರು, ಫೆಬ್ರವರಿ ತಿಂಗಳು ನೋಡೋಕೆ ಎಷ್ಟು ಕರೆಕ್ಟ್ ಆಗಿ ಇದೆಯೋ ಜೀವನ ಕೂಡ ಇದೇ ರೀತಿ ಸಾಗಲಿ ಎಂದು ಹೇಳುತ್ತಿದ್ದಾರೆ.
ಕೇವಲ12 ರೂಪಾಯಿಗೆ ಸಿಗುತ್ತೆ ಇಷ್ಟೊಂದು ಲಾಭ: ಕೇಂದ್ರ ಸರ್ಕಾರದ ಈ ಯೋಜನೆಯ ಬಗ್ಗೆ ಇಲ್ಲಿದೆ ಮಾಹಿತಿ
ಇನ್ನು ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಇನ್ನೊಂದು ಸುದ್ದಿ ವ್ಯಾಪಕವಾಗಿ ಹರಿದಾಡಿತು. ಅದೇನಂದ್ರೆ ಈ ರೀತಿ ಆಯಾತಾಕಾರದ ಫೆಬ್ರವರಿ ಕ್ಯಾಲೆಂಡರ್ 200 ವರ್ಷಕ್ಕೊಮ್ಮೆ ಮಾತ್ರ ಕಾಣಸಿಗೋದು ಅಂತಾ. ಆದರೆ 2010ರಲ್ಲೂ ಇದೇ ರೀತಿಯ ಆಯತ ಫೆಬ್ರವರಿ ತಿಂಗಳೇ ಇತ್ತು.