alex Certify ಬಾಲಕನ ಸಾವಿಗೆ ಕಾರಣವಾಯ್ತು ಸೆಲ್ಫಿ ಕ್ರೇಜ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕನ ಸಾವಿಗೆ ಕಾರಣವಾಯ್ತು ಸೆಲ್ಫಿ ಕ್ರೇಜ್….!

13-Year-Old Boy Electrocuted While Taking Selfie With Friends on Odisha Train Coach

ಭುವನೇಶ್ವರ: ಸ್ನೇಹಿತರೊಡಗೂಡಿ ರೈಲು ಬೋಗಿಯ ಟಾಪ್ ಹತ್ತಿ ಸೆಲ್ಫಿ ಕ್ಲಿಕ್ಕಿಸಲು ಹೋದ 13 ವರ್ಷದ ಬಾಲಕ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಘಟನೆ ಒಡಿಶಾದಲ್ಲಿ ನಡೆದಿದೆ. ಸೂರ್ಯ ಎಂಬ ಬಾಲಕ ಸುಟ್ಟು ಹೋಗಿದ್ದು, ಆತನ ಇಬ್ಬರು ಸ್ನೇಹಿತರು ಗಾಯಗೊಂಡಿದ್ದಾರೆ. ಘಟನೆಯು ಗಜಪತಿ ಜಿಲ್ಲೆಯಲ್ಲಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಪರ್ಲಖೇಮುಡಿ ಎಂಬ ರೈಲ್ವೆ ನಿಲ್ದಾಣದಲ್ಲಿ ಕೋವಿಡ್ ಯುನಿಟ್ ಆಗಿ ಪರಿವರ್ತಿಸಿ ನಿಲ್ಲಿಸಿದ್ದ ಬೋಗಿಯ ಮೇಲೆ ಸೂರ್ಯ ಹಾಗೂ ಸ್ನೇಹಿತರು ಹತ್ತಿದ್ದರು. ರೈಲು ಓಡಲು ವಿದ್ಯುತ್ ಸಂಪರ್ಕಕ್ಕಾಗಿ ಇರುವ ವಿದ್ಯುತ್ ಲೈನ್ ಅನ್ನು ಸೂರ್ಯ ಸ್ಪರ್ಷಿಸಿದ್ದ. ಆತನಿಗೆ ಹಾಗೂ ರೈಲ್ವೆ ಬೋಗಿಗೂ ಬೆಂಕಿ ಹತ್ತಿಕೊಂಡಿತ್ತು. ಸೂರ್ಯ ಅರೆ ಕ್ಷಣದಲ್ಲಿ ಸ್ಥಳದಲ್ಲೇ ಸುಟ್ಟು ಕರಕಲಾದ.‌ ಬೋಗಿಗೆ ಹತ್ತಿದ್ದ ಬೆಂಕಿಯನ್ನು ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ನಂದಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...