ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ಮಹಾರಾಷ್ಟ್ರದ 12 ವರ್ಷದ ಬಾಲಕಿಯೊಬ್ಬಳು ಬಾಂದ್ರಾ ವರ್ಲಿ ಸೇತುವೆಯಿಂದ ಗೇಟ್ ವೇ ಆಫ್ ಇಂಡಿಯಾವರೆಗೂ ಈಜುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾಳೆ.
ಸೇಲರ್ ಮದನ್ ರವಿ ಪುತ್ರಿಯಾದ ಜಿಯಾ ರೈ, 8 ಗಂಟೆ 40 ನಿಮಿಷಗಳ ಅವಧಿಯಲ್ಲಿ 36 ಕಿಮೀ ಈಜುವ ಮೂಲಕ ಈ ಸಾಧನೆಗೈದಿದ್ದಾಳೆ. ಆಟಿಸಂ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಯಾ ಅರಬ್ಬಿ ಸಮುದ್ರದಲ್ಲಿ ಈ ಮ್ಯಾರಾಥಾನ್ ಈಜಿನಲ್ಲಿ ಭಾಗಿಯಾಗಿದ್ದಾಳೆ.
ಬಸಂತ್ ಪಂಚಮಿಯಂದು ಯೋಧರಿಂದ ಬೊಂಬಾಟ್ ಡಾನ್ಸ್
ಜಿಯಾಳ ಈ ಸಾಧನೆಯ ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕೆಯ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ. ಗ್ರೇಟರ್ ಮುಂಬಯಿಯ ಜಲಕ್ರೀಡಾ ಸಂಘದ ಅಧ್ಯಕ್ಷ ಜರೀರ್ ಎನ್ ಬಲಿವಾಲಾ ಅವರು ಜಿಯಾಳನ್ನು ಸನ್ಮಾನಿಸಿದ್ದಾರೆ.