ಸುದ್ದಿಪತ್ರಿಕೆಗಳ ಹಾಳೆಗಳನ್ನು ಬಳಸಿಕೊಂಡು ಸ್ಟೀಮ್ ಇಂಜಿನ್ ಚಾಲಿತ ಲೋಕೋಮೋಟಿವ್ನ ಪ್ರತಿರೂಪವನ್ನು ರಚಿಸಿರುವ ಕೇರಳದ ತ್ರಿಶ್ಶುರಿನ 12 ವರ್ಷದ ಬಾಲಕನೊಬ್ಬ ತನ್ನ ಕ್ರಿಯಾಶೀಲತೆಯಿಂದ ನೆಟ್ಟಿಗರ ಮನಸೂರೆಗೊಂಡಿದ್ದಾನೆ.
ಅದ್ವೈತ್ ಕೃಷ್ಣ ಹೆಸರಿನ ಈ ಬಾಲಕ 7ನೇ ಕ್ಲಾಸ್ನಲ್ಲಿ ಓದುತ್ತಿದ್ದು, ಮೂರು ದಿನಗಳ ಅವಧಿಯಲ್ಲಿ 33 ಹಾಳೆ ಹಾಗೂ 10 A4 ಶೀಟ್ಗಳನ್ನು ಬಳಸಿಕೊಂಡು ತನ್ನ ಕನಸಿದ ರಚನೆಯನ್ನು ಮಾಡಿದ್ದಾನೆ. ಈತ ತ್ರಿಶ್ಶೂರಿನ CNN ಬಾಲಕರ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಬಾಲಕನ ಈ ರೈಲು ಪ್ರೀತಿಯನ್ನು ಮೆಚ್ಚಿಕೊಂಡಿರುವ ರೈಲ್ವೇ ಇಲಾಖೆ, ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಆತ ಹಾಗೂ ಆತನ ಕೆಲಸದ ಫೋಟೋವನ್ನು ಪೋಸ್ಟ್ ಮಾಡಿದೆ.
https://twitter.com/RailMinIndia/status/1275982710708637696?ref_src=twsrc%5Etfw%7Ctwcamp%5Etweetembed%7Ctwterm%5E1275982710708637696%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2F12-year-old-kerala-boy-makes-train-model-using-newspapers-way-to-go-young-artist-netizens-say%2F611995