ದೇಶದಲ್ಲೇ ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿರುವ ಮಹಾರಾಷ್ಟ್ರದ ಥಾಣೆಯಲ್ಲಿ 106 ವಯಸ್ಸಿನ ಅಜ್ಜಿಯೊಬ್ಬರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಅಷ್ಟೇ ಅಲ್ಲದೆ, ಕೊರೋನಾ ಸೋಂಕು ತಗುಲಿತ್ತು ಎಂಬುದನ್ನು ಬಹಿರಂಗಪಡಿಸುವುದಕ್ಕೇ ಹಿಂಜರಿಯುತ್ತಿರುವವರ ನಡುವೆ ಈ ಅಜ್ಜಿ ತುಂಬಾ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ.
ಈಕೆಗೆ ವಯಸ್ಸಾಗಿದ್ದ ಹಿನ್ನೆಲೆಯಲ್ಲಿ ಬಹುತೇಕ ಆಸ್ಪತ್ರೆಗಳು ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದವು. ಎಲ್ಲಿಯೂ ಚಿಕಿತ್ಸೆ ಸಿಗದೆ ಕಂಗಾಲಾಗಿದ್ದ ಅಜ್ಜಿಯ ಕುಟುಂಬದ ನೆರವಿಗೆ ಬಂದದ್ದು ಕೆಡಿಎಂಸಿ ವತಿಯಿಂದ ಸವ್ಳಾರಾಮ್ ಕ್ರೀಡಾ ಸಂಕುಲದಲ್ಲಿ ಸಿದ್ಧಪಡಿಸಿದ 1 ರೂ. ಆಸ್ಪತ್ರೆ.
10 ದಿನಗಳ ಚಿಕಿತ್ಸೆಯಿಂದ ಗುಣಮುಖರಾದ ಬಳಿಕ ಆಕೆಗೊಂದು ಪ್ರಮಾಣಪತ್ರ ಕೊಡುವ ಮೂಲಕ ಸನ್ಮಾನಿಸಲಾಯಿತು. ಪ್ರಮಾಣಪತ್ರ ಪ್ರದರ್ಶನ ಮಾಡಿ ನಗೆ ಬೀರಿದ್ದಾರೆ ಅಜ್ಜಿ.
https://twitter.com/DrSEShinde/status/1307587705266606081?ref_src=twsrc%5Etfw%7Ctwcamp%5Etweetembed%7Ctwterm%5E1307587705266606081%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2F106-year-old-woman-flaunts-her-discharge-certificate-after-defeating-covid-19-in-maharashtra-2893167.html