alex Certify ಕೊರೊನಾ ಲಸಿಕೆ ಸ್ವೀಕರಿಸಿದ 101 ವರ್ಷದ ವೃದ್ಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಸ್ವೀಕರಿಸಿದ 101 ವರ್ಷದ ವೃದ್ಧ

ಸ್ಪ್ಯಾನಿಶ್​ ಫ್ಲೂ ಮಹಾಮಾರಿ ಕೊನೆಗೊಂಡ ಒಂದು ವರ್ಷದ ಬಳಿಕ ಜನಿಸಿದ್ದ ಬ್ರಿಜ್​ ಪ್ರಕಾಶ್​ ಗುಪ್ತಾ ಎಂಬವರು ಬುಧವಾದ ದೆಹಲಿಯಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್​ನ್ನು ಸ್ವೀಕರಿಸಿದ್ದಾರೆ ಎಂದು ಅವರ ಪುತ್ರ ಮಾಹಿತಿ ನೀಡಿದ್ದಾರೆ.

101 ವರ್ಷದ ಬ್ರಿಜ್​ ಪ್ರಕಾಶ್​ ಗುಪ್ತಾ ಕಳೆದ ವರ್ಷ ಮಾರ್ಚ್​ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಮನೆಯಿಂದ ಹೊರಬಂದಿದ್ದು ಕೋವಿಶೀಲ್ಡ್​ನ ಮೊದಲ ಡೋಸ್​ನ್ನು ಪಡೆದಿದ್ದಾರೆ. ನಮ್ಮ ತಂದೆ ಲಸಿಕೆ ಸ್ವೀಕರಿಸಿದ ಬಳಿಕ ಆರಾಮಾಗಿ ಇದ್ದಾರೆ ಎಂದು ಅವರ ಪುತ್ರ ವಿಮಲ್​ ಗುಪ್ತಾ ಮಾಹಿತಿ ನೀಡಿದ್ರು.

ನಮ್ಮ ತಂದೆ 1920ರ ನವೆಂಬರ್​ 26ರಂದು ದೆಹಲಿಯಲ್ಲಿ ಜನಿಸಿದ್ರು. ದೆಹಲಿಯ ಬ್ಯಾಂಕ್​ ಒಂದರಲ್ಲಿ ನಮ್ಮ ತಂದೆ ಮ್ಯಾನೇಜರ್​ ಆಗಿ ಕೆಲಸ ಮಾಡಿದ್ದಾರೆ. ವಿಭಜನಾ ಸಂದರ್ಭದಲ್ಲಿ ಹಿಂಸಾಚಾರ ನಡೆದಿದ್ದರಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಮ್ಮ ತಂದೆ ಸ್ವಂತ ಉದ್ಯಮ ಆರಂಭಿಸಿದ್ರು ಎಂದು ವಿಮಲ್​ ಗುಪ್ತಾ ಹೇಳಿದ್ರು.
ಬಿಎಲ್​ಕೆ ಆಸ್ಪತ್ರೆಯಲ್ಲಿ ಈವರೆಗೆ ಲಸಿಕೆ ಪಡೆದವರಲ್ಲಿ ಇವರೇ ಅತ್ಯಂತ ಹಿರಿಯ ವ್ಯಕ್ತಿ ಎಂದು ಆಸ್ಪತ್ರೆ ವಕ್ತಾರ ಮಾಹಿತಿ ನೀಡಿದ್ರು

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...