ಸ್ಪ್ಯಾನಿಶ್ ಫ್ಲೂ ಮಹಾಮಾರಿ ಕೊನೆಗೊಂಡ ಒಂದು ವರ್ಷದ ಬಳಿಕ ಜನಿಸಿದ್ದ ಬ್ರಿಜ್ ಪ್ರಕಾಶ್ ಗುಪ್ತಾ ಎಂಬವರು ಬುಧವಾದ ದೆಹಲಿಯಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್ನ್ನು ಸ್ವೀಕರಿಸಿದ್ದಾರೆ ಎಂದು ಅವರ ಪುತ್ರ ಮಾಹಿತಿ ನೀಡಿದ್ದಾರೆ.
101 ವರ್ಷದ ಬ್ರಿಜ್ ಪ್ರಕಾಶ್ ಗುಪ್ತಾ ಕಳೆದ ವರ್ಷ ಮಾರ್ಚ್ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಮನೆಯಿಂದ ಹೊರಬಂದಿದ್ದು ಕೋವಿಶೀಲ್ಡ್ನ ಮೊದಲ ಡೋಸ್ನ್ನು ಪಡೆದಿದ್ದಾರೆ. ನಮ್ಮ ತಂದೆ ಲಸಿಕೆ ಸ್ವೀಕರಿಸಿದ ಬಳಿಕ ಆರಾಮಾಗಿ ಇದ್ದಾರೆ ಎಂದು ಅವರ ಪುತ್ರ ವಿಮಲ್ ಗುಪ್ತಾ ಮಾಹಿತಿ ನೀಡಿದ್ರು.
ನಮ್ಮ ತಂದೆ 1920ರ ನವೆಂಬರ್ 26ರಂದು ದೆಹಲಿಯಲ್ಲಿ ಜನಿಸಿದ್ರು. ದೆಹಲಿಯ ಬ್ಯಾಂಕ್ ಒಂದರಲ್ಲಿ ನಮ್ಮ ತಂದೆ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ. ವಿಭಜನಾ ಸಂದರ್ಭದಲ್ಲಿ ಹಿಂಸಾಚಾರ ನಡೆದಿದ್ದರಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಮ್ಮ ತಂದೆ ಸ್ವಂತ ಉದ್ಯಮ ಆರಂಭಿಸಿದ್ರು ಎಂದು ವಿಮಲ್ ಗುಪ್ತಾ ಹೇಳಿದ್ರು.
ಬಿಎಲ್ಕೆ ಆಸ್ಪತ್ರೆಯಲ್ಲಿ ಈವರೆಗೆ ಲಸಿಕೆ ಪಡೆದವರಲ್ಲಿ ಇವರೇ ಅತ್ಯಂತ ಹಿರಿಯ ವ್ಯಕ್ತಿ ಎಂದು ಆಸ್ಪತ್ರೆ ವಕ್ತಾರ ಮಾಹಿತಿ ನೀಡಿದ್ರು