alex Certify ಬೀದಿಯಲ್ಲಿ ಸಾಕ್ಸ್ ಮಾರುತ್ತಿದ್ದ ಬಾಲಕನಿಗೆ ನೆರವಾದ​ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀದಿಯಲ್ಲಿ ಸಾಕ್ಸ್ ಮಾರುತ್ತಿದ್ದ ಬಾಲಕನಿಗೆ ನೆರವಾದ​ ಸಿಎಂ

ಕೊರೊನಾ ಕಾಲದಿಂದಾಗಿ ಶಾಲೆಗಳು ಕಳೆದೊಂದು ವರ್ಷದಿಂದ ಭಾಗಶಃ ಬಂದ್​ ಆಗಿದೆ. ಕೆಲ ಮಕ್ಕಳು ಆನ್​ಲೈನ್​ ಶಿಕ್ಷಣದ ಮೂಲಕ ವ್ಯಾಸಂಗ ಮಾಡುತ್ತಿದ್ದರೆ ಇನ್ನು ಕೆಲ ಬಡ ಮಕ್ಕಳ ಪಾಡು ಮೂರಾಬಟ್ಟೆಯಾಗಿದೆ. ಇದೇ ಕಾರಣಕ್ಕೆ 10 ವರ್ಷದ ಬಾಲಕ ವಂಶ್​ ಸಿಂಗ್​ ಇಂಟರ್ನೆಟ್​ನಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾನೆ.

ಶಾಲೆಯನ್ನ ಬಿಟ್ಟಿರುವ ಈ ಬಾಲಕ ಪಂಜಾಬ್​​ನ ಲುಧಿಯಾನದ ರಸ್ತೆ ಬದಿಯಲ್ಲಿ ಸಾಕ್ಸ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾನೆ.

ಕಡುಬಡತನದ ಕುಟುಂಬದಲ್ಲಿ ಜನಿಸಿರುವ ವಂಶ್​​ ಕುಟುಂಬ ನಿರ್ವಹಣೆಗಾಗಿ ಇಷ್ಟು ಸಣ್ಣ ವಯಸ್ಸಿನಲ್ಲಿಯೇ ದುಡಿಯುವಂತಾಗಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವಿಡಿಯೋದಲ್ಲಿ ವ್ಯಕ್ತಿ ಕನಿಕರದಿಂದ 50 ರೂಪಾಯಿ ಹೆಚ್ಚಿನ ಹಣವನ್ನ ನೀಡಲು ಹೋದರೂ ಸಹ ಬಾಲಕ ಅದನ್ನ ನಿರಾಕರಿಸಿದ್ದಾನೆ. ಈ ವಿಡಿಯೋ ಟ್ವಿಟರ್​ನಲ್ಲಿ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದ ಇತರೆ ವೇದಿಕೆಗಳಲ್ಲಿ ವೈರಲ್​ ಆಗಿದೆ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಾಡಿದೆ ಅಂದರೆ ಸ್ವತಃ ಪಂಜಾಬ್​ ಸಿಎಂ ಅಮರಿಂದರ್​ ಸಿಂಗ್​ ಈ ವಿಡಿಯೋವನ್ನ ವೀಕ್ಷಿಸಿದ್ದಾರೆ. ಅಲ್ಲದೇ ತಮ್ಮ ಟ್ವಿಟರ್​ ಪೇಜ್​ನಲ್ಲಿ ಈ ವಿಡಿಯೋವನ್ನ ಶೇರ್​ ಮಾಡಿದ್ದಾರೆ. ಅಲ್ಲದೇ ಬಾಲಕನನ್ನ ಸಂಪರ್ಕ ಮಾಡಿ ಆತನ ಜೊತೆ ಮಾತನ್ನೂ ಆಡಿದ್ದಾರೆ.

ಬಾಲಕ ವಂಶ್​ ಸಿಂಗ್​ ಜೊತೆ ಫೋನಿನಲ್ಲಿ ಮಾತನಾಡಿದ್ದೇನೆ. ಲುಧಿಯಾನದ ರಸ್ತೆಯಲ್ಲಿ 2ನೇ ತರಗತಿಗೇ ವ್ಯಾಸಂಗ ನಿಲ್ಲಿಸಿದ ಬಾಲಕ ಸಾಕ್ಸ್ ಮಾರಾಟ ಮಾಡ್ತಿರೋದನ್ನ ವಿಡಿಯೋ ಮೂಲಕ ಗಮನಿಸಿದ್ದೇನೆ. ಜಿಲ್ಲಾಧಿಕಾರಿಗಳ ಬಳಿ ಈತ ಶಾಲೆಗೆ ಮರುಸೇರ್ಪಡೆಯಾಗೋದನ್ನ ನೋಡಿಕೊಳ್ಳಿ ಎಂದು ಸೂಚನೆ ನೀಡಿದ್ದೇನೆ. ಅಲ್ಲದೇ ಆತನ ಕುಟುಂಬಕ್ಕೆ 2 ಲಕ್ಷ ರೂಪಾಯಿ ತುರ್ತು ಪರಿಹಾರ ಘೋಷಣೆ ಮಾಡಿದ್ದೇನೆ ಎಂದು ಅಮರಿಂದರ್​ ಸಿಂಗ್​ ಟ್ವೀಟಾಯಿಸಿದ್ದಾರೆ.

ಸಿಎಂ ಅಮರಿಂದರ್​ ಸಿಂಗ್​ ಟ್ವೀಟ್​ನ್ನು ಅನೇಕರು ಶೇರ್​ ಮಾಡಿದ್ದಾರೆ. ಹಾಗೂ ಅಮರೀಂದರ್​ ಸಿಂಗ್​ ಮಾನವೀಯತೆಗೆ ನೆಟ್ಟಿಗರು ತಲೆಬಾಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...