alex Certify ಸರ್ಜರಿ ಮಾಡಿ ತಲೆ ಬೇರ್ಪಡಿಸಿದ್ದ ಅವಳಿ ಮಗು ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಜರಿ ಮಾಡಿ ತಲೆ ಬೇರ್ಪಡಿಸಿದ್ದ ಅವಳಿ ಮಗು ಇನ್ನಿಲ್ಲ

ದೇಶದ ಮೊದಲ ಕ್ರಾನಿಯೋಫಾಗಸ್ ಸರ್ಜರಿ ಮೂಲಕ ತನ್ನ ಅವಳಿಯಿಂದ ಬೇರ್ಪಡಿಸಲಾಗಿದ್ದ ಕಾಲಿಯಾ ಹೆಸರಿನ ಮಗು ಕೊನೆಯುಸಿರೆಳೆದಿದೆ. ಒಡಿಶಾದ ಕಟಕ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಈ ಮಗು ಮೃತಪಟ್ಟಿದೆ.

ಒಂದಕ್ಕೊಂದು ಅಂಟಿಕೊಂಡ ತಲೆಯೊಂದಿಗೆ ಹುಟ್ಟಿದ ಈ ಅವಳಿಗಳನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ (ಏಮ್ಸ್‌) ಸಂಸ್ಥೆಯಲ್ಲಿ 2017ರಲ್ಲಿ ವಿಶೇಷ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಬೇರ್ಪಡಿಸಲಾಗಿತ್ತು. ಎರಡು ವರ್ಷಗಳ ಮಟ್ಟಿಗೆ ವೀಕ್ಷಣೆಯಲ್ಲಿ ಇಟ್ಟ ಬಳಿಕ ಇಬ್ಬರೂ ಮಕ್ಕಳನ್ನು ಕಟಕ್ ‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜಿನಲ್ಲಿ ಮುಂದುವರೆದ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

ಒಡಿಶಾದ ಕಂದಮಾಲ್‌ ಜಿಲ್ಲೆಯ ಬುಡಕಟ್ಟು ಮಹಿಳೆಯೊಬ್ಬರಿಗೆ ಜಗ್ಗ ಹಾಗೂ ಕಾಲಿಯಾ ಹಸರಿನ ಈ ಅವಳಿಗಳ ಮೆದುಳು ಹಾಗೂ ತಲೆಯ ಚಿಪ್ಪುಗಳು ಒಂದಕ್ಕೊಂದು ಅಂಟಿಕೊಂಡಂತೆ ಹುಟ್ಟಿದ್ದವು. ಈ ಪರಿಸ್ಥಿತಿಯನ್ನು ಕ್ರಾನಿಯೋಫಾಗಸ್ ಎಂದು ಕರೆಯಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...