ದೇಶದ ಮೊದಲ ಕ್ರಾನಿಯೋಫಾಗಸ್ ಸರ್ಜರಿ ಮೂಲಕ ತನ್ನ ಅವಳಿಯಿಂದ ಬೇರ್ಪಡಿಸಲಾಗಿದ್ದ ಕಾಲಿಯಾ ಹೆಸರಿನ ಮಗು ಕೊನೆಯುಸಿರೆಳೆದಿದೆ. ಒಡಿಶಾದ ಕಟಕ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಈ ಮಗು ಮೃತಪಟ್ಟಿದೆ.
ಒಂದಕ್ಕೊಂದು ಅಂಟಿಕೊಂಡ ತಲೆಯೊಂದಿಗೆ ಹುಟ್ಟಿದ ಈ ಅವಳಿಗಳನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ (ಏಮ್ಸ್) ಸಂಸ್ಥೆಯಲ್ಲಿ 2017ರಲ್ಲಿ ವಿಶೇಷ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಬೇರ್ಪಡಿಸಲಾಗಿತ್ತು. ಎರಡು ವರ್ಷಗಳ ಮಟ್ಟಿಗೆ ವೀಕ್ಷಣೆಯಲ್ಲಿ ಇಟ್ಟ ಬಳಿಕ ಇಬ್ಬರೂ ಮಕ್ಕಳನ್ನು ಕಟಕ್ ನ ಎಸ್‌ಸಿಬಿ ವೈದ್ಯಕೀಯ ಕಾಲೇಜಿನಲ್ಲಿ ಮುಂದುವರೆದ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಒಡಿಶಾದ ಕಂದಮಾಲ್ ಜಿಲ್ಲೆಯ ಬುಡಕಟ್ಟು ಮಹಿಳೆಯೊಬ್ಬರಿಗೆ ಜಗ್ಗ ಹಾಗೂ ಕಾಲಿಯಾ ಹಸರಿನ ಈ ಅವಳಿಗಳ ಮೆದುಳು ಹಾಗೂ ತಲೆಯ ಚಿಪ್ಪುಗಳು ಒಂದಕ್ಕೊಂದು ಅಂಟಿಕೊಂಡಂತೆ ಹುಟ್ಟಿದ್ದವು. ಈ ಪರಿಸ್ಥಿತಿಯನ್ನು ಕ್ರಾನಿಯೋಫಾಗಸ್ ಎಂದು ಕರೆಯಲಾಗುತ್ತದೆ.